ಕರ್ನಾಟಕ

karnataka

ETV Bharat / state

ಮನೆಯಲ್ಲಿ ಯಾರೂ ಇಲ್ಲದಿರುವುದನ್ನ ಗಮನಿಸಿ ಸರಣಿ ಕಳ್ಳತನ

ಗಂಗಾವತಿಯ ಬಸ್ ನಿಲ್ದಾಣಕ್ಕೆ ಸಮೀಪವಿರುವ ವಿಜಯನಗರ ಹಾಗೂ ವಿವೇಕಾನಂದ ಕಾಲೋನಿಯಲ್ಲಿನ ಸರ್ಕಾರಿ ನಿವೃತ್ತ ನೌಕರರ ಮನೆಗಳಲ್ಲಿ ಸರಣಿ ಕಳ್ಳತನ ನಡೆದಿದೆ.

ಮನೆಯಲ್ಲಿ ಯಾರು ಇಲ್ಲದಿರುವುದನ್ನ ಗಮನಿಸಿ ಸರಣಿ ಕಳ್ಳತನ

By

Published : Sep 16, 2019, 10:38 AM IST


ಕೊಪ್ಪಳ:ಗಂಗಾವತಿಯ ಬಸ್ ನಿಲ್ದಾಣಕ್ಕೆ ಸಮೀಪವಿರುವ ವಿಜಯನಗರ ಹಾಗೂ ವಿವೇಕಾನಂದ ಕಾಲೋನಿಯಲ್ಲಿನ ಸರ್ಕಾರಿ ನಿವೃತ್ತ ನೌಕರರ ಮನೆಗಳಲ್ಲಿ ಸರಣಿ ಕಳ್ಳತನ ನಡೆದಿದೆ.

ವಿವೇಕಾನಂದ ಕಾಲೋನಿಯ ನಿವಾಸಿ ಜೆಸ್ಕಾಂ ಇಲಾಖೆಯ ನಿವೃತ್ತ ನೌಕರ ಸೂಗರಯ್ಯ ಸ್ವಾಮಿ ಹಾಗೂ ವಿಜಯನಗರ ಕಾಲೋನಿಯ ಆರೋಗ್ಯ ಇಲಾಖೆಯ ನಿವೃತ್ತ ವೈದ್ಯಾಧಿಕಾರಿ ಜಿ.ಗುರುಮೂರ್ತಿ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಎರಡು ಮನೆಯ ಮಾಲೀಕರು ನಾಲ್ಕೈದು ದಿನಗಳಿಂದ ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿದ ಕಳ್ಳರು, ಕನ್ನ ಹಾಕಿದ್ದಾರೆ.

ಈ ಬಗ್ಗೆ ಕಳ್ಳತನವಾಗಿರುವ ಮನೆಯ ಮಾಲೀಕರು ಗಂಗಾವತಿ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details