ಕರ್ನಾಟಕ

karnataka

By

Published : Oct 21, 2019, 4:39 PM IST

Updated : Oct 21, 2019, 6:05 PM IST

ETV Bharat / state

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ಫೋಟ: ಸಚಿವ ಜಗದೀಶ್​ ಶೆಟ್ಟರ್​​ ಪ್ರತಿಕ್ರಿಯೆ ಏನು?

ಇಂದು ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ನಡೆದ ಸ್ಫೋಟದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ ಹಾಗೂ ಈ ಕುರಿತು ಸಭೆ ನಡೆಸುತ್ತೇನೆ ಎಂದು ಸಚಿವ ಜಗದೀಶ್​​ ಶೆಟ್ಟರ್​ ತಿಳಿಸಿದ್ದಾರೆ. ಇನ್ನು, ಸಾವರ್ಕರ್ ಗೆ ಭಾರತ ರತ್ನ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಒಂದು ಬಾರಿ ಇತಿಹಾಸವನ್ನು ಓದಿಕೊಳ್ಳಲಿ ಎಂದು ಕಿಡಿಕಾರಿದ್ದಾರೆ.

ಸಚಿವ ಜಗದೀಶ್​ ಶೆಟ್ಟರ್​​

ಕೊಪ್ಪಳ:ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಇಂದು ಸಂಭವಿಸಿದ ಸ್ಫೋಟ ಪ್ರಕರಣದ ಬಗ್ಗೆ ಅಧಿಕಾರಿಗಳೊಂದಿಗೆ ಇನ್ನೂ ನಾನು ಮಾತನಾಡಿಲ್ಲ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸಚಿವ ಜಗದೀಶ್​ ಶೆಟ್ಟರ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ನಾನು ಸಹ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದರು. ಈಗಾಗಲೇ ಬಾಂಗ್ಲಾ ವಲಸಿಗರ ಬಗ್ಗೆ ನಾವು ಸದನದಲ್ಲಿ ಮಾತಾಡಿದ್ದೇವೆ. ಅಕ್ರಮವಾಗಿ ಬಾಂಗ್ಲಾ ನುಸುಳುಕೋರರು ಬಂದು ರಾಜ್ಯದಲ್ಲಿ ನೆಲೆಸಿದ್ದಾರೆ ಎಂದು ಸಹ ಹೇಳಿದ್ದೆವು. ಆದರೆ ಆಗ ಪರಮೇಶ್ವರ್ ಇದರ ಬಗ್ಗೆ ಗಂಭೀರವಾಗಿ ಆಗಿ ಯೋಚನೆ ಮಾಡಿರಲಿಲ್ಲ. ಈಗ ಅದರ ಪರಿಣಾಮ ಎದುರಿಸುತ್ತಿದ್ದೇವೆ ಎಂದರು.

ಸಚಿವ ಜಗದೀಶ್​ ಶೆಟ್ಟರ್​​

ಇನ್ನು, ಸಾವರ್ಕರ್ ಗೆ ಭಾರತ ರತ್ನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶೆಟ್ಟರ್​ ಅವರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಕೃಷ್ಣ ಬೈರೇಗೌಡ, ಅವರು ಸಾವರ್ಕರ್ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ನಾಳೆ ಟಿಪ್ಪು ಸುಲ್ತಾನ್ ಗೆ ಭಾರತ ರತ್ನ ಕೊಡಿ ಅಂತಾರೆ. ಟಿಪ್ಪು ಸುಲ್ತಾನ್​​ ಜಯಂತಿ ಆಚರಣೆ ಯಾರಿಗೂ ಇಷ್ಟವಿರಲಿಲ್ಲ. ವೋಟ್ ಬ್ಯಾಂಕ್​​ಗಾಗಿ ಟಿಪ್ಪು ಜಯಂತಿ ಆಚರಣೆ ಮಾಡಿದ್ದಾರೆ ಎಂದು ಟೀಕಿಸಿದರು.

ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಎಲ್ಲರೂ ಒತ್ತಾಯಿಸೋಣ. ಹಿಂದೆ ಯುಪಿಎ ಸರ್ಕಾರವಿದ್ದಾಗ ಕಾಂಗ್ರೆಸ್ ನವರು ಮಲಗಿಕೊಂಡಿದ್ರಾ ಎಂದು ಕಿಡಿಕಾರಿದರು. ಸಾವರ್ಕರ್ ಅವರು ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ ಸ್ವಾತಂತ್ರ್ಯ ಸೇನಾನಿ. ಅಂತಹ ಮಹನೀಯ ವ್ಯಕ್ತಿ ಬಗ್ಗೆ ಕೀಳಾಗಿ ಮಾತಾನಾಡಲು ನಿಮಗೆ ನಾಚಿಕೆ ಇಲ್ವಾ ಎಂದು ಶೆಟ್ಟರ್​ ಗುಡುಗಿದರು. ಅಲ್ಲದೆ ಸಿದ್ದರಾಮಯ್ಯ ಮೊದಲು ಇತಿಹಾಸ ತಿಳಿದುಕೊಳ್ಳಲಿ ಎಂದು ಕುಟುಕಿದರು.

Last Updated : Oct 21, 2019, 6:05 PM IST

ABOUT THE AUTHOR

...view details