ಕರ್ನಾಟಕ

karnataka

ETV Bharat / state

ಡಿಕೆಶಿ ಬಂಧನಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ, ಕಾಂಗ್ರೆಸ್​ ಗೂಬೆ ಕೂರಿಸುತ್ತಿದೆ: ಸಂಗಣ್ಣ ಕರಡಿ - DK Shivakumar arrest

ಡಿ.ಕೆ.‌ಶಿವಕುಮಾರ್ ಅವರ ಮೇಲೆ ಈ ಹಿಂದೆಯೇ ಐಟಿ ದಾಳಿಯಾಗಿತ್ತು. ಆ ಕುರಿತಂತೆ ಮಾಹಿತಿ ಕಲೆಹಾಕಿ ಈಗ ಅವರನ್ನು ಇಡಿ ಬಂಧಿಸಿದೆ. ಅವರ ಬಂಧನದ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಕಾಂಗ್ರೆಸ್ ನವರು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.

ಸಂಗಣ್ಣ ಕರಡಿ

By

Published : Sep 6, 2019, 3:11 PM IST

Updated : Sep 6, 2019, 3:20 PM IST

ಕೊಪ್ಪಳ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಬಂಧನಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ವಿನಾಕಾರಣ ಕಾಂಗ್ರೆಸ್ ನವರು ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.

ನಗರದ ಮೀಡಿಯಾ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂಸದ ಸಂಗಣ್ಣ ಕರಡಿ, ಡಿ.ಕೆ.‌ಶಿವಕುಮಾರ್ ಅವರ ಮೇಲೆ ಈ ಹಿಂದೆಯೇ ಐಟಿ ದಾಳಿಯಾಗಿತ್ತು. ಆ ಕುರಿತಂತೆ ಮಾಹಿತಿ ಕಲೆಹಾಕಿ ಈಗ ಅವರನ್ನು ಇಡಿ ಬಂಧಿಸಿದೆ. ಅವರ ಬಂಧನದ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಕಾಂಗ್ರೆಸ್ ನವರು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದರು.

ಡಿಕೆಶಿ ಬಂಧನಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ

ಡಿಕೆಶಿ ಬಂಧನ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ. ಪ್ರತಿಭಟನೆ ಹೆಸರಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡುವುದು ಸರಿಯಲ್ಲ. ಡಿಕೆಶಿ ಪ್ರಕರಣವನ್ನು ಜನರ ಗಮನದಿಂದ ಡೈವರ್ಟ್ ಮಾಡುವ ಕಾಂಗ್ರೆಸ್ ನ ಪ್ರಯತ್ನವಿದು. ಪ್ರತಿಭಟನೆಯಲ್ಲಿ ಬಿಜೆಪಿಯವರು ಸೇರಿಕೊಂಡು ಕಲ್ಲು ಹೊಡೆಯುತ್ತಿದ್ದಾರೆ ಎಂಬ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿಕೆ ಸರಿಯಲ್ಲ. ಅವರು ಜಾಣ್ಮೆ ಉತ್ತರ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

ಶೋಭಾ ಕರಂದ್ಲಾಜೆ ಅವರು ಈಗ ಯಾರಿಗೆ ಬಳೆ ತೊಡಿಸುತ್ತಾರೆ ಎಂಬ ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಸಂಸದರು, ಅವರಿಗೀಗ ಮಾಡಲು ಕೆಲಸವಿಲ್ಲ. ಕೆಲಸ ಮಾಡುವ ತಾಕತ್ತು ಇರುವುದರಿಂದಲೇ ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಅವರು ಅಧಿಕಾರದಲ್ಲಿರುವಾಗ ಘೋಷಣೆ‌ ಮಾಡಿಸಿದ ಅನುದಾನದಲ್ಲಿ ನಯಾ ಪೈಸೆಯನ್ನು ಬಿಡುಗಡೆ ಮಾಡಿಸಿಲ್ಲ ಎಂದು ತಿರುಗೇಟು ನೀಡಿದರು.

ಬಿಜೆಪಿ ಜಿಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ಮುಖಂಡರಾದ ಚಂದ್ರಶೇಖರ್ ಕವಲೂರು, ಚಂದ್ರಶೇಖರಗೌಡ ಪಾಟೀಲ್, ರಾಜು ಬಾಕಳೆ ಸೇರಿದಂತೆ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

Last Updated : Sep 6, 2019, 3:20 PM IST

ABOUT THE AUTHOR

...view details