ಗಂಗಾವತಿ:ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ತಾಣವಾದ ಅಂಜನಾದ್ರಿ ಬೆಟ್ಟದ ಆಂಜನೇಯ ದೇಗುಲದಲ್ಲಿ ಭಕ್ತರು ಸಲ್ಲಿಸಿದ ಕಾಣಿಕೆಯ ಪೆಟ್ಟಿಗೆ (ಹುಂಡಿ) ಯನ್ನು ತಹಸೀಲ್ದಾರ್ ಎಲ್.ಡಿ. ಚಂದ್ರಕಾಂತ್ ನೇತೃತ್ವದಲ್ಲಿ ಮಂಗಳವಾರ ತೆರೆಯಲಾಯಿತು.
ಅಂಜಾನಾದ್ರಿಯಲ್ಲಿ 51 ದಿನದ ಬಳಿಕ ಹುಂಡಿ ತೆರೆದ ಕಂದಾಯ ಸಿಬ್ಬಂದಿ ಮುಜರಾಯಿ ಇಲಾಖೆ ವಶಕ್ಕೆ ಪಡೆದುಕೊಂಡ ಬಳಿಕ ಪ್ರತಿ ತಿಂಗಳು ಭಕ್ತರು ಸಲ್ಲಿಸಿದ ಕಾಣಿಕೆಯನ್ನು ಎಣಿಕೆ ಮಾಡಲಾಗುತ್ತಿದೆ. ಆದರೆ ಕಳೆದ 51 ದಿನಗಳ ಬಳಿಕ ಇದೇ ಮೊದಲ ಬಾರಿಗೆ ಧೀರ್ಘ ಕಾಲದ ಬಳಿಕ ಹುಂಡಿ ತೆರೆಯಲಾಗಿದೆ.
ಇದೇ ಮೊದಲ ಬಾರಿ ಭಕ್ತರು ಹಾಕಿದ್ದ ದೇಣಿಗೆ, ಕಾಣಿಕೆ (9.48 ಲಕ್ಷ) ಹತ್ತು ಲಕ್ಷ ರೂಪಾಯಿ ಸನಿಹಕ್ಕೆ ಬಂದಿದೆ. ಕಳೆದ ಬಾರಿ ಅಂದರೆ 20.09.2019ಕ್ಕೆ ಹುಂಡಿ ತೆಗೆದಾಗ 8.29 ಲಕ್ಷ ಮೊತ್ತದ ಹಣ ಸಂಗ್ರಹವಾಗಿತ್ತು. ಈ ಬಾರಿ ದಾಖಲೆ ಯನ್ನು ಮೀರಿಸಿದೆ.
ಜೊತೆಗೆ ಅಮೆರಿಕಾದ ಒಂದೊಂದು ಡಾಲರ್ನ ಮೂರು ನೋಟು, ನೇಪಾಳದ ಐದು ರೂಪಾಯಿಯ ಎರಡು ಹಾಗೂ ಹತ್ತು ರೂಪಾಯಿಯ ಮೂರು ನೋಟು ಪತ್ತೆಯಾಗಿವೆ. ಜೊತೆಗೆ ಹನುಮಂತ ದೇವರಿಗೆ ಒಂದು ತೊಟ್ಟಿಲನ್ನ ಭಕ್ತರೊಬ್ಬರು ನೀಡಿದ್ದಾರೆ.