ಕರ್ನಾಟಕ

karnataka

ETV Bharat / state

ಗಂಗಾವತಿ: ಕೈ ಬಿಟ್ಟು ಕಮಲ ಮುಡಿದ ತಾಪಂ ಸದಸ್ಯ - gangavati koppala latest news

ಮಾಜಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ಅವರ ಕಟ್ಟಾ ಬೆಂಬಲಿಗ ಹುಲಿಹೈದರ ಕ್ಷೇತ್ರದ ಪಂಚಾಯತ್​ ಸದಸ್ಯ ಕನಕಪ್ಪ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

Taluka panchayat member of Congress joins BJP
ಕಾಂಗ್ರೆಸ್​ನ ತಾಲೂಕು ಪಂಚಾಯತ್​ ಸದಸ್ಯ ಬಿಜೆಪಿಗೆ ಸೇರ್ಪಡೆ!

By

Published : Feb 22, 2020, 6:52 PM IST

ಗಂಗಾವತಿ:ಮಾಜಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ಅವರ ಕಟ್ಟಾ ಬೆಂಬಲಿಗ ಹುಲಿಹೈದರ ಕ್ಷೇತ್ರದ ಪಂಚಾಯತ್​ ಸದಸ್ಯ ಕನಕಪ್ಪ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಕಳೆದ ತಾಲೂಕು ಪಂಚಾಯತ್​ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುವುದಾಗಿ ಮನೆ ಬಾಗಿಲಿಗೆ ಬಂದಿದ್ದರೂ ಕೂಡಾ ನಿರಾಕರಿಸಿದ್ದ ಕನಕಪ್ಪ, ಪೈಪೋಟಿ ನಡೆಸಿ ಕಾಂಗ್ರೆಸ್ ಟಿಕೆಟ್ ಪಡೆದಿದ್ದರು. ಅಲ್ಲದೇ ತಾಲೂಕು ಪಂಚಾಯತ್​ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿ ಗೆಲವು ಸಾಧಿಸಿದ್ದರು.

ಆದರೆ ಕಳೆದ ಹಲವು ದಿನಗಳಿಂದ ಪಕ್ಷದಲ್ಲಿ ಉಸಿರುಗಟ್ಟಿಸುವ ವಾತಾವರಣ ಇದೆ ಎಂದು ಆರೋಪಿಸುತ್ತಿರುವ ಕನಕಪ್ಪ, ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ದಡೇಸೂಗುರು ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ABOUT THE AUTHOR

...view details