ಕುಷ್ಟಗಿ (ಕೊಪ್ಪಳ) :ಕುಷ್ಟಗಿ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರರಾಗಿದ್ದ ಕೆ ಎಂ ಗುರು ಬಸವರಾಜ್ ಮಹಿಳಾ ಸಿಬ್ಬಂದಿಗೆ ಮುತ್ತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಅಧರದಿಂದ ಉದರಕ್ಕೆ ಕಲ್ಲು.. ಮಹಿಳಾ ಸಿಬ್ಬಂದಿಗೆ ಮುತ್ತಿಟ್ಟ ತಹಶೀಲ್ದಾರ್ ಅಮಾನತು - ಕೊಪ್ಪಳ ತಹಶೀಲ್ದಾರ ಕಚೇರಿ ಸುದ್ದಿ
ತಮ್ಮ ಅಧೀನ ಸಿಬ್ಬಂದಿಯ ಜೊತೆ ನಡೆದುಕೊಂಡ ರೀತಿಯಿಂದಾಗಿ ತಹಶೀಲ್ದಾರ್ ಹುದ್ದೆಗೆ ಚ್ಯುತಿ ಬಂದಿದೆ. ಹಾಗಾಗಿ, ಅವರನ್ನು ಅಮಾನತುಗೊಳಿಸಲಾಗಿದೆ..

ಮಹಿಳಾ ಸಿಬ್ಬಂದಿಗೆ ಮುತ್ತಿಟ್ಟ ತಹಶೀಲ್ದಾರ್ ಅಮಾನತು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರು ಬಸವರಾಜ್ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ನಿಗದಿತ ಸಮಯದಲ್ಲಿ ಲಿಖಿತ ಹೇಳಿಕೆ ನೀಡಿರಲಿಲ್ಲ.
ಜವಾಬ್ದಾರಿಯುತ ಸ್ಥಾನದಲ್ಲಿದ್ದು, ತಮ್ಮ ಅಧೀನ ಸಿಬ್ಬಂದಿಯ ಜೊತೆ ನಡೆದುಕೊಂಡ ರೀತಿಯಿಂದಾಗಿ ತಹಶೀಲ್ದಾರ್ ಹುದ್ದೆಗೆ ಚ್ಯುತಿ ಬಂದಿದೆ. ಹಾಗಾಗಿ, ಕೆ ಎಂ ಗುರುಬಸವರಾಜ್ ಅವರನ್ನು ಅಮಾನತುಗೊಳಿಸಲಾಗಿದೆ.