ಕುಷ್ಟಗಿ :ಅಂಜನಾದ್ರಿ ಬೆಟ್ಟಕ್ಕೆ ಬೆಳಗಾವಿ, ವಿಜಯಪುರ, ಬಾಗಲಕೋಟೆಯಿಂದ ಮೂರುವರೆ ಸಾವಿರಕ್ಕೂ ಅಧಿಕ ಹನುಮ ಮಾಲಾಧಾರಿಗಳು ಬರುತ್ತಿದ್ದಾರೆ. ಬೆಟ್ಟ ಹತ್ತೇ ಹತ್ತುತ್ತೇವೆ. ಹೇಗೆ ತಡೆಯುತ್ತೀರಿ ನೋಡೋಣ ಎಂದು ಶ್ರೀರಾಮಚಂದ್ರ ಸೇನೆಯ ವಿಭಾಗೀಯ ಅಧ್ಯಕ್ಷ ಸಂಜೀವ ಮರಡಿ ಡಿಸಿಗೆ ಸವಾಲು ಹಾಕಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕೊಪ್ಪಳ ಜಿಲ್ಲಾಧಿಕಾರಿಗಳು ಅಂಜನಾದ್ರಿ ಬೆಟ್ಟಕ್ಕೆ ಅನ್ಯ ಜಿಲ್ಲೆಯ ಹನುಮ ಮಾಲಾಧಾರಿಗಳಿಗೆ ನಿರ್ಬಂಧ ಹೇರಿದ್ದಾರೆ. ಒಂದು ಜಿಲ್ಲೆಯ ಜಿಲ್ಲಾಧಿಕಾರಿ ಇನ್ನೊಂದು ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಹನುಮ ಮಾಲಧಾರಿಗಳ ನಿರ್ಬಂಧದ ಬಗ್ಗೆ ಪತ್ರ ಬರೆದಿದ್ದು, ಯಾವ ಅರ್ಹ ಪತ್ರ ಅಲ್ಲ, ಬರೀ ಖಾಲಿ ಪತ್ರ ಮಾತ್ರ.
ಜಿಲ್ಲಾಧಿಕಾರಿಗಳು ಇತರೆ ಜಿಲ್ಲೆಗಳ ಜಿಲ್ಲಾಧಿಕಾರಿಗೆ ಮನವಿ ಮಾಡಬೇಕೆ ವಿನಃ ಆದೇಶ ಮಾಡಿರುವುದು ಸರಿ ಅಲ್ಲ. ಕೊಪ್ಪಳ ಜಿಲ್ಲಾಧಿಕಾರಿಗಳೆ ನೀವು ಜನ ಸೇವಕರಾಗಿದ್ದು, ಜನ ಸೇವೆ ಮಾಡಬೇಕು ಎಂದರು.