ಕರ್ನಾಟಕ

karnataka

ETV Bharat / state

ಕೊಪ್ಪಳ: ರಾಡ್​​ನಿಂದ ಹೊಡೆದು ಹೆತ್ತವರನ್ನೇ ಹತ್ಯೆಗೈದ ಪಾಪಿ ಮಗ

ಕಬ್ಬಿಣದ ರಾಡ್​​ನಿಂದ ಹಲ್ಲೆ ಮಾಡಿ ಹೆತ್ತವರನ್ನೇ ಮಗನೋರ್ವ ಹತ್ಯೆ ಮಾಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದ್ದು, ಕನಕಗಿರಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Son kills his parents in Koppal
ರಾಡ್​​ನಿಂದ ಹೊಡೆದು ಹೆತ್ತವರನ್ನೇ ಹತ್ಯೆಗೈದ ಪಾಪಿ ಮಗ

By

Published : Jun 2, 2020, 9:55 AM IST

ಕೊಪ್ಪಳ:ಮಗನೊಬ್ಬ ತನ್ನ ಹೆತ್ತವರನ್ನೇ ಕಬ್ಬಿಣದ ರಾಡ್​​ನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕನಕಗಿರಿ ಪಟ್ಟಣದ 9ನೇ ವಾರ್ಡ್​ನಲ್ಲಿ ಇಂದು ಬೆಳಗಿನ ಜಾವ ನಡೆದಿದೆ.

ರಾಡ್​​ನಿಂದ ಹೊಡೆದು ಹೆತ್ತವರನ್ನೇ ಹತ್ಯೆಗೈದ ಪಾಪಿ ಮಗ

ರಮೇಶ್ ಮಡಿವಾಳರ (26) ಪೋಷಕರನ್ನು ಹತ್ಯೆ ಮಾಡಿದ ಆರೋಪಿ. ಅಕ್ಕಮ್ಮ (46) ಹಾಗೂ ಗಿರಿಯಪ್ಪ (56) ಮೃತರು. ರಮೇಶ್​​ನ ಪತ್ನಿಯನ್ನು ಮನೆಗೆ ಕರೆತರುವ ವಿಚಾರಕ್ಕೆ ಆರೋಪಿ ಹಾಗೂ ತಂದೆ- ತಾಯಿ ನಡುವೆ ಗಲಾಟೆಯಾಗಿದೆ. ಜಗಳ ತಾರಕಕ್ಕೇರಿದ್ದು, ರಾಡ್​​ನಿಂದ ಪೋಷಕರ ಮೇಲೆ ಹಲ್ಲೆ ಮಾಡಿದ್ದಾನೆ. ಅಕ್ಕಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಗಿರಿಯಪ್ಪ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಕನಕಗಿರಿ ಪೊಲೀಸರು ಹಾಗೂ ಸಿಪಿಐ ಸುರೇಶ್ ತಳವಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ABOUT THE AUTHOR

...view details