ಕರ್ನಾಟಕ

karnataka

ETV Bharat / state

ಶೋಭಾ ಕರಂದ್ಲಾಜೆ ಮೋದಿ ಹಾಗೂ ಶಾಗೆ ಸೀರೆ, ಬಳೆ ತೊಡಿಸುತ್ತಾರಾ?.. ಶಿವರಾಜ ತಂಗಡಗಿ ಪ್ರಶ್ನೆ.. - ಮಾಜಿ ಸಚಿವ ಶಿವರಾಜ ತಂಗಡಗಿ

ನೆರೆ ಸಂತ್ರಸ್ತರಿಗೆ ಹಿಂದಿನ ರಾಜ್ಯ ಸರ್ಕಾರ ಪರಿಹಾರ ಹಣ ಬಿಡುಗಡೆ ಮಾಡಿಲ್ಲ. ಅವರಿಗೆ ಬಳೆ, ಸೀರೆ ತೊಡಿಸಬೇಕು ಎಂದು ಹೇಳುವ ಶೋಭಾ ಕರಂದ್ಲಾಜೆ ಅವರು ಈಗ ಅವರ ಪಕ್ಷದ 24 ಸಂಸದರಿಗೆ, ಮೋದಿ ಹಾಗೂ ಶಾಗೆ ಸೀರೆ, ಬಳೆ ತೊಡಿಸುತ್ತಾರಾ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಪ್ರಶ್ನೆ ಮಾಡಿದ್ದಾರೆ. ​​​​​​​

ಶೋಭಾ ಕರಂದ್ಲಾಜೆ ಮೋದಿ ಹಾಗೂ ಶಾ ಗೆ ಸೀರೆ, ಬಳೆ ತೊಡಿಸುತ್ತಾರಾ..?ಶಿವರಾಜ ತಂಗಡಗಿ

By

Published : Sep 4, 2019, 4:47 PM IST

ಕೊಪ್ಪಳ: ನೆರೆ ಸಂತ್ರಸ್ತರಿಗೆ ಹಿಂದಿನ ರಾಜ್ಯ ಸರ್ಕಾರ ಪರಿಹಾರ ಹಣ ಬಿಡುಗಡೆ ಮಾಡಿಲ್ಲ. ಅವರಿಗೆ ಬಳೆ, ಸೀರೆ ತೊಡಿಸಬೇಕು ಎಂದು ಹೇಳುವ ಶೋಭಾ ಕರಂದ್ಲಾಜೆ ಅವರು ಈಗ ಅವರ ಪಕ್ಷದ 24 ಸಂಸದರಿಗೆ, ಮೋದಿ ಹಾಗೂ ಶಾಗೆ ಸೀರೆ, ಬಳೆ ತೊಡಿಸುತ್ತಾರಾ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಪ್ರಶ್ನೆ ಮಾಡಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶೋಭಾ ಕರಂದ್ಲಾಜೆ ಒಬ್ಬ ಹೆಣ್ಣು ಮಗಳಾಗಿ ಹೇಗೆ ಮಾತನಾಡಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಅವರಿಗೆ ಸೀರೆ, ಬಳೆ ತೊಡಿಸುತ್ತೇನೆ ಎಂದು ಮಾತನಾಡುತ್ತಾರೆ. ಆದರೆ, ನೆರೆ ಸಂತ್ರಸ್ತರಿಗೆ ಇನ್ನೂ ಪರಿಹಾರ ಹಣ ಬಂದಿಲ್ಲ. ಈಗ ಅವರು ತಮ್ಮ ಪಕ್ಷದ 24 ಸಂಸದರಿಗೆ ಬಳೆ, ಸೀರೆ ತೊಡಿಸುತ್ತಾರಾ ಎಂದಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆಗೆ ತಿರುಗೇಟು ಕೊಟ್ಟ ಮಾಜಿ ಸಚಿವ ಶಿವರಾಜ ತಂಗಡಗಿ..

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಿ, ಶೋಭಾ ಕರಾಂದ್ಲಾಜೆ ಎಲ್ಲಿ. ಸಿದ್ಧರಾಮಯ್ಯ ಅವರ ವಯಸ್ಸು, ಅನುಭವದ ಮುಂದೆ ಶೋಭಾ ಕರಂದ್ಲಾಜೆ ಸರಿಸಮವಲ್ಲ. ಆದರೂ ಸಹ ಸಿದ್ಧರಾಮಯ್ಯ ಅವರ ಬಗ್ಗೆ ಅವರು ಕೇವಲವಾಗಿ ಮಾತನಾಡಿದ್ದಾರೆ. ಟೀಕೆ ಮಾಡಬೇಕು. ಆದರೆ, ಆರೋಗ್ಯಯುತವಾಗಿ ಟೀಕಿಸಬೇಕು. ಬಿಜೆಪಿಯವರ ರೀತಿ ಮಾತನಾಡುವ ಸಂಸ್ಕೃತಿಯನ್ನು ನಮ್ಮ ಹಿರಿಯರು ನಮಗೆ ಕಲಿಸಿಲ್ಲ ಎಂದರು.

ಇನ್ನು ಡಿಕೆ ಶಿವಕುಮಾರ್ ಅವರನ್ನು ಇಡಿ ಬಂಧಿಸಿರುವ ಕುರಿತಂತೆ ಮಾತನಾಡಿದ ತಂಗಡಗಿ, ಇದು ರಾಜಕೀಯ ಪ್ರೇರಿತ ಎಂದು ಆಪಾದಿಸಿದರು. ಬ್ಯಾಂಕ್‌ಗಳಿಗೆ ಸಾಲ ಮರುಪಾವತಿಸದೆ ದೇಶಬಿಟ್ಟು ಹೋದವರ ಮೇಲೆ ಈ ಬಿಜೆಪಿ ಸರ್ಕಾರ ಏನೂ ಕ್ರಮ ಕೈಗೊಳ್ಳುವುದಿಲ್ಲ. ಆದರೆ, ವಿಚಾರಣೆಗೆ ಹಾಜರಾಗಿ ಸಹಕಾರ ನೀಡಿದರೂ ಬಂಧಿಸುತ್ತಾರೆ. ಇಡಿ, ಐಟಿ ಹಾಗೂ ಸಿಬಿಐಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಆಪರೇಷನ್ ಕಮಲದಲ್ಲಿ ಆಮಿಷವೊಡ್ಡಿರುವ ಕುರಿತು ಸದನದಲ್ಲಿ ಬಹಿರಂಗವಾದರೂ ಯಡಿಯೂರಪ್ಪ ಅವರ ಮೇಲೆ ಯಾಕೆ ಸುಮೋಟೋ ಕೇಸ್ ದಾಖಲಿಸಲಿಲ್ಲ ಎಂದು ಪ್ರಶ್ನಿಸಿದರು.

ಡಿಕೆ ಶಿವಕುಮಾರ್ ಅವರು ಕೇವಲ ವ್ಯಕ್ತಿಯಲ್ಲ. ಅವರೊಬ್ಬ ಶಕ್ತಿ. ಅವರು ಆರೋಪಮುಕ್ತರಾಗಿ ಹೊರಬರುತ್ತಾರೆ ಎಂದು ಶಿವರಾಜ ತಂಗಡಗಿ ವಿಶ್ವಾಸ ವ್ಯಕ್ತಪಡಿಸಿದರು‌.

ABOUT THE AUTHOR

...view details