ಗಂಗಾವತಿ (ಕೊಪ್ಪಳ): ಕೊರೊನಾದಂತ ಮಾರಕ ಸಂದರ್ಭದಲ್ಲಿ ಸದ್ಯ ನಡೆಯಬೇಕಿರುವ ನಾನಾ ತರಗತಿಗಳ ಮತ್ತು ಉನ್ನತ ಶಿಕ್ಷಣದ ಪರೀಕ್ಷೆಗಳನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿ ಎಸ್ಎಫ್ಐ ಸಂಘಟನೆಯ ಮುಖಂಡರು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪರೀಕ್ಷೆ ರದ್ದು ಮಾಡುವಂತೆ ಎಸ್ಎಫ್ಐ ಸಂಘಟನೆ ಆಗ್ರಹ ಆನೆಗೊಂದಿ ರಸ್ತೆಯಲ್ಲಿರುವ ಮಿನಿ ವಿಧಾನಸೌಧಕ್ಕೆ ತೆರಳಿದ ಸಂಘಟನೆಯ ಮುಖಂಡರು ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಪ್ರಸಕ್ತ ವರ್ಷದ ಶೈಕ್ಷಣಿಕ ಪರೀಕ್ಷೆಗಳನ್ನು ರದ್ದು ಮಾಡಬೇಕು. ಈ ಮೂಲಕ ಕೊರೊನಾದಿಂದ ವಿದ್ಯಾರ್ಥಿ ಸಮುದಾಯವನ್ನು ರಕ್ಷಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಕೊರೊನಾ ಲಾಕ್ಡೌನ್ ಪರಿಣಾಮದಿಂದ ಜನ ಮಾಡಲು ಕೆಲಸವಿಲ್ಲದೆ ಊಟಕ್ಕೂ ಪರದಾಡುತ್ತಿರುವ ಸನ್ನಿವೇಶ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಓದಿಗಾಗಿ ಶುಲ್ಕ, ಪರೀಕ್ಷೆ ಎಂದರೆ ಬಹುತೇಕ ಪಾಲಕರು ಮಕ್ಕಳ ಓದು ನಿಲ್ಲಿಸುವ ಸಾಧ್ಯತೆ ಇದೇ ಎಂದು ಸಂಘಟನೆಯ ಮುಖಂಡ ಗ್ಯಾನೇಶ ಆತಂಕ ವ್ಯಕ್ತಪಡಿಸಿದರು.
ಪರೀಕ್ಷೆ ರದ್ದು ಮಾಡುವಂತೆ ಎಸ್ಎಫ್ಐ ಸಂಘಟನೆ ಆಗ್ರಹ ಸರ್ಕಾರ ವಿದ್ಯಾರ್ಥಿಗಳ ಸಮಸ್ಯೆ, ಶೈಕ್ಷಣಿಕ ಭವಿಷ್ಯ ಸೇರಿದಂತೆ ಯಾವುದರ ಬಗ್ಗೆಯೂ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದ ಸಂಘಟಕರು, ಕೂಡಲೇ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.