ಕೊಪ್ಪಳ : ಜಿಲ್ಲೆಯ ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ರೈಲಿನ ಮಾದರಿಯಲ್ಲಿ ಪೇಂಟ್ ಮಾಡಿಸಿ ಎಲ್ಲರ ಗಮನ ಸಳೆಯಲಾಗಿದೆ. ಈ ಶಾಲೆಗೆ ಆರು ಕೊಠಡಿಗಳಿವೆ. ಈ ಆರೂ ಕೊಠಡಿಗಳಿಗೆ ಭಾರತೀಯ ರೈಲು ಮಾದರಿಯಲ್ಲಿ ಪೇಂಟ್ ಮಾಡಲಾಗಿದೆ.
ಇಲ್ಲೊಂದು ಓಡದ ರೈಲು .. ಇದಕ್ಕೆ ಮಕ್ಕಳೇ ಪ್ರಯಾಣಿಕರು...! - ಕೊಪ್ಪಳ
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ರೈಲಿನ ಮಾದರಿಯಲ್ಲಿ ಪೇಂಟ್ ಮಾಡಿಸಿ ಎಲ್ಲರ ಗಮನ ಸಳೆಯಲಾಗಿದೆ. ಈ ಶಾಲೆಗೆ ಆರು ಕೊಠಡಿಗಳಿವೆ. ಈ ಆರೂ ಕಟ್ಟಡಗಳಿಗೆ ಭಾರತೀಯ ರೈಲು ಮಾದರಿಯಲ್ಲಿ ಪೇಂಟ್ ಮಾಡಲಾಗಿದೆ.
ಇಲ್ಲೊಂದು ಓಡದ ರೈಲು : ಇದಕ್ಕೆ ಮಕ್ಕಳೇ ಪ್ರಯಾಣಿಕರು...!
ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಮೈಕ್ರೋ ಯೋಜನೆಯಡಿ ಸುಮಾರು 42. 68 ಲಕ್ಷ ರೂ. ಖರ್ಚು ಮಾಡಿ ಇಂತಹ ಭಿನ್ನ ರೀತಿಯ ಶಾಲಾ ಕಟ್ಟಡ ನಿರ್ಮಿಸಲಾಗಿದೆ.
ಮಕ್ಕಳಿಗೆ ಇಷ್ಟವಾಗುವ ರೀತಿ ಕಟ್ಟಡಕ್ಕೆ ಬಣ್ಣ ಬಳಿಯಬೇಕೆಂದು ಮೊದಲೇ ಶಿಕ್ಷಕರು ಏಜೆನ್ಸಿಗೆ ಮನವಿ ಮಾಡಿದ್ದು, ರೈಲಿನ ಮಾದರಿಯಲ್ಲಿ ಕಟ್ಟಡಕ್ಕೆ ಪೇಂಟಿಂಗ್ ಮಾಡಲಾಗಿದೆ. ಕಟ್ಟಡದ ಅಂದ ನೋಡಿದ ಮಕ್ಕಳು ಶಾಲೆಗೆ ಖುಷಿ ಖುಷಿಯಾಗಿ ಈಗ ಬರುತ್ತಿದ್ದಾರೆ ಎಂದು ಶಾಲಾ ಶಿಕ್ಷಕರು ಹೇಳುತ್ತಾರೆ.