ಕುಷ್ಟಗಿ (ಕೊಪ್ಪಳ):ಕುಷ್ಟಗಿ ತಾಲೂಕಿನ ಕಲಕೇರಿ ಗ್ರಾಮದಿಂದ ಉಪ್ಪಾರ ಬಸಾಪುರ ಗ್ರಾಮಗಳ ಸಂಪರ್ಕದ ಗ್ರಾಮೀಣ ರಸ್ತೆ, ಚರಂಡಿ ನೀರಿನಿಂದ ಹಾಳಾಗಿದೆ. ಈ ರಸ್ತೆಯಲ್ಲಿ ಸಂಚಾರ ಮಾಡಲು ಹರಸಾಹಸವನ್ನೇ ಪಡಬೇಕಾಗಿದೆ.
ಗದ್ದೆಯಂತಾಗಿರುವ ರಸ್ತೆ... ಕೆಸರಿಗೆ ಸಿಲುಕಿಕೊಂಡ ಮೂರು ಟ್ರಾಕ್ಟರ್ಗಳು! - kustagi news
ರೈತರೊಬ್ಬರ ಜಮೀನಿನಲ್ಲಿ ಬೆಳೆದ ಕೃಷಿ ಉತ್ಪನ್ನವನ್ನು ತರಲು ಟ್ರಾಕ್ಟರ್ ಮೂಲಕ ತೆರಳಿದ್ದ ವೇಳೆ ಟ್ರಾಕ್ಟರ್ ಸಿಲುಕಿಕೊಂಡಿದೆ. ಇದನ್ನು ಎಳೆಯಲು ಬಂದ ಇನ್ನೆರಡೂ ಟ್ರಾಕ್ಟರ್ಗಳು ಕೂಡ ಈ ಕೆಸರಲ್ಲಿ ಸಿಲುಕಿಕೊಂಡಿವೆ.
ಯಾವುದೇ ವಾಹನಗಳು ಈ ರಸ್ತೆಯಲ್ಲಿ ಸಂಚಾರ ಮಾಡಿದರೂ ಇಲ್ಲಿನ ಚರಂಡಿ ರೂಪದ ರಸ್ತೆಗೆ ಸಿಲುಕಿಕೊಳ್ಳುವುದು ಸಹಜ. ಇದಕ್ಕೆ ಉದಾಹರಣೆ ಎಂಬಂತೆ, ರೈತರೊಬ್ಬರ ಜಮೀನಿನಲ್ಲಿ ಬೆಳೆದ ಕೃಷಿ ಉತ್ಪನ್ನವನ್ನು ತರಲು ಟ್ರಾಕ್ಟರ್ ಮೂಲಕ ತೆರಳಿದ್ದ ವೇಳೆ ಟ್ರಾಕ್ಟರ್ ಸಿಲುಕಿಕೊಂಡಿದೆ. ಇದನ್ನು ಎಳೆಯಲು ಮತ್ತೊಂದು ಟ್ರಾಕ್ಟರ್ ಕರೆಸಲಾಗಿದೆ. ಅದೂ ಸಹ ಮಣ್ಣಿಗೆ ಸಿಲುಕಿಕೊಂಡಿದೆ. ಇವೆರೆಡೂ ಟ್ರಾಕ್ಟರ್ ಹೊರತರಲು ಮತ್ತೊಂದು ಟ್ರಾಕ್ಟರ್ ನಿಂದ ಯತ್ನಿಸಿದಾಗ ಅದುಕೂಡ ಸಿಲುಕಿಕೊಂಡಿದೆ. ಮೂರು ಟ್ರಾಕ್ಟರ್ಗಳು ಸಿಲುಕಿಕೊಂಡಾಗ ರೈತರು ಬೇರೆ ಮಾರ್ಗ ಇಲ್ಲದೆ ಇಲ್ಲದೆ ಜೆಸಿಬಿ ಯಂತ್ರ ತರಿಸಿ ಕೆಸರಿನ ಮಡುವಿನಲ್ಲಿ ಸಿಲುಕಿದ್ದ ಮೂರು ಟ್ರಾಕ್ಟರ್ಗಳನ್ನು ಆ ರಸ್ತೆಯಿಂದ ಹೊರತಂದಿದ್ದಾರೆ.
ರಸ್ತೆಯನ್ನು ಸರಿಪಡಿಸಬೇಕು ಎಂದು ಕೇಸೂರು ಗ್ರಾ.ಪಂ. ಪಿಡಿಓ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಕೂಡಲೇ ಚರಂಡಿ ನೀರು ನಿಯಂತ್ರಿಸಿ, ರಸ್ತೆ ಸುಧಾರಿಸಬೇಕು ಎಂದು ರೈತರು ಆಗ್ರಹ ಮಾಡುತ್ತಿದ್ದಾರೆ.