ಕುಷ್ಟಗಿ(ಕೊಪ್ಪಳ): ಕೃಷಿ ಇಲಾಖೆಯಲ್ಲಿ ರೈತ ಮಿತ್ರ ಅನುವುಗಾರರನ್ನು ಪರಿಗಣಿಸಿ, ರೈತ ಅನುವುಗಾರರ (ಕೃಷಿ ತಾಂತ್ರಿಕ ಉತ್ತೇಜಕರು) ಸೇವೆಯನ್ನು ಮುಂದುವರೆಸುವಂತೆ ಒತ್ತಾಯಿಸಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಅವರಿಗೆ ತಾಲೂಕಿನ ರೈತ ಅನುವುಗಾರರ ಸಂಘದಿಂದ ಮನವಿ ಸಲ್ಲಿಸಲಾಯಿತು.
ರೈತ ಅನುವುಗಾರರ ಸೇವೆಯನ್ನು ಮುಂದುವರೆಸುವಂತೆ ಕೃಷಿ ಸಚಿವರಿಗೆ ಮನವಿ
ರೈತ ಅನುವುಗಾರರ (ಕೃಷಿ ತಾಂತ್ರಿಕ ಉತ್ತೇಜಕರು) ಸೇವೆಯನ್ನು ಮುಂದುವರೆಸುವಂತೆ ಒತ್ತಾಯಿಸಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಅವರಿಗೆ ತಾಲೂಕಿನ ರೈತ ಅನುವುಗಾರರ ಸಂಘದಿಂದ ಮನವಿ ಸಲ್ಲಿಸಲಾಯಿತು.
ಇಲ್ಲಿನ ಹೆದ್ದಾರಿ ಮೇಲ್ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಸರ್ಕ್ಯೂಟ್ ಹೌಸ್ನಲ್ಲಿ ರೈತ ಅನುವುಗಾರರ ಮನವಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ ಅವರು, ಈ ರೈತ ಅನುವುಗಾರರನ್ನು ಕೃಷಿ ಸಚಿವರಾದ ಮೇಲೆ ಕೆಲಸದಿಂದ ತೆಗೆದಿಲ್ಲ, ಈ ಹಿಂದೆಯೇ ಆಗಿದೆ. ಇವರುಗಳ ಸೇವೆಯನ್ನು ಮುಂದುವರಿಸುವ ಬಗ್ಗೆ ಸುಳ್ಳು ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿ ಅಲ್ಲಿಂದ ನಿರ್ಗಮಿಸಿದರು.
ತಾಲೂಕಿನಲ್ಲಿ 42 ಜನ, 2009ರಿಂದ ಕೃಷಿ ಅನುವುಗಾರರು ಸೇವೆಯಲ್ಲಿದ್ದು, ಭೂ ಚೇತನ, ಸುವರ್ಣ ಭೂಮಿ ಯೋಜನೆಯಲ್ಲಿ ಸೇರಿಸಿಕೊಂಡು ಅಗತ್ಯವಾದಾಗ ಕೆಲಸಕ್ಕೆ ತೆಗೆದುಕೊಂಡು ಈಗ ಕೈ ಬಿಟ್ಟಿರುವ ಬಗ್ಗೆ ಹಂಪಯ್ಯ ವಣಗೇರಾ, ಶುಕಮುನಿ ಗುಮಗೇರಾ ಬೇಸರ ವ್ಯಕ್ತಪಡಿಸಿದರು.