ಕುಷ್ಟಗಿ(ಕೊಪ್ಪಳ): ಗ್ರಾಮ ಪಂಚಾಯ್ತಿ ಚುನಾವಣೆ ಹಿನ್ನೆಲೆ ಕೆಲವೆಡೆ ಅವಿರೋಧ ಆಯ್ಕೆಗೆ ಒಲವು ವ್ಯಕ್ತವಾಗಿದೆ.
ಕುಷ್ಟಗಿ ಗ್ರಾ.ಪಂ. ಎಲೆಕ್ಷನ್:ಚುನಾವಣೆಗೂ ಮೊದಲೇ ಅವಿರೋಧ ಆಯ್ಕೆ! - village panchayath election latest updates
ಈ ಬಾರಿ ಗ್ರಾಮ ಪಂಚಾಯ್ತಿ ಚುನಾವಣೆಗೆ ಕೆಲವು ಕಡೆ ಅವಿರೋಧ ಆಯ್ಕೆ ನಡೆಯುತ್ತಿದ್ದು,ಕುಷ್ಟಗಿ ತಾಲೂಕಿನ ಅಂಟರಠಾಣ ಗ್ರಾ.ಪಂ.ವ್ಯಾಪ್ತಿಯ ಕಡೂರು ಗ್ರಾಮದ ವ್ಯಕ್ತಿಯನ್ನು ಕೂಡ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನಲ್ಲಿ 2ನೇ ಹಂತದ ಗ್ರಾ.ಪಂ. ಚುನಾವಣೆ ಡಿ. 27 ರಂದು ನಿಗದಿಯಾಗಿದೆ. ಹೀಗಾಗಿ ಡಿ.7ರಿಂದ ನಾಮಪತ್ರ ಸಲ್ಲಿಕೆ ಕಾರ್ಯವೂ ಆರಂಭವಾಗಿದೆ. ಆದರೆ ಕುಷ್ಟಗಿ ತಾಲೂಕಿನ ಅಂಟರಠಾಣ ಗ್ರಾ.ಪಂ.ವ್ಯಾಪ್ತಿಯ ಕಡೂರು ಗ್ರಾಮದ ವ್ಯಕ್ತಿ ಈಗಾಗಲೇ ಅವಿರೋಧ ಆಯ್ಕೆಗೆ ನಿರ್ದೇಶನಗೊಂಡಿದ್ದಾರೆ.
ರವಿ ಬಾಗೇವಾಡಿ ಎಂಬುವವರನ್ನು ಗ್ರಾಮಸ್ಥರು ಒಗ್ಗೂಡಿ ಅವಿರೋಧ ಆಯ್ಕೆ ಮಾಡಲು ನಿರ್ಧರಿಸಿದ್ದಾರೆ. ಈ ಚುನಾವಣೆಗೆ ರವಿ ಬಾಗೇವಾಡಿ ಹೊರತು ಪಡಿಸಿ, ಬೇರೆ ಯಾರೂ ನಾಮಪತ್ರ ಸಲ್ಲಿಸುವುದಿಲ್ಲ. ರವಿ ಬಾಗೇವಾಡಿ ಆಯ್ಕೆ ಅಂತಿಮ ಎಂದು ಗ್ರಾಮದ ಶಂಕರ ಕರಪಡಿ ಕಾಟಾಪೂರ ಎಂಬುವವರು ಮಾಹಿತಿ ನೀಡಿದ್ದಾರೆ.