ಗಂಗಾವತಿ: ಕನಕಗಿರಿ ಸೇರಿದಂತೆ ನೀರಾವರಿ ಭಾಗವಾದ ಕಾರಟಗಿ ಮತ್ತು ಗಂಗಾವತಿಯ ತಾಲೂಕುಗಳಲ್ಲಿ ಬೆಳ್ಳಂಬೆಳಗ್ಗೆ ವರುಣನ ಆಗಮನದಿಂದಾಗಿ ವಾತಾವರಣ ತಂಪಾಗಿದೆ.
ಗಂಗಾವತಿ ಸೇರಿ ಹಲವಡೆ ಬೆಳ್ಳಂಬೆಳಗ್ಗೆ ವರುಣನ ದರ್ಶನ
ಕನಕಗಿರಿ ಸೇರಿದಂತೆ ನೀರಾವರಿ ಭಾಗವಾದ ಕಾರಟಗಿ ಮತ್ತು ಗಂಗಾವತಿಯ ತಾಲೂಕುಗಳಲ್ಲಿ ಬೆಳ್ಳಂಬೆಳಗ್ಗೆ ವರುಣನ ಆಗಮನದಿಂದಾಗಿ ವಾತಾವರಣ ತಂಪಾಗಿದೆ.
ವರುಣನ ದರ್ಶನ
ಕಳೆದ ನಾಲ್ಕೈದು ದಿನಗಳಿಂದ ಕಾದ ಕಾವಲಿಯಂತಾಗಿದ್ದ ಬಯಲುಸೀಮೆಯ ವಾತಾವರಣಕ್ಕೆ ಜನ ಕಂಗೆಟ್ಟು ಹೋಗಿದ್ದರು. ಆದರೆ ಶನಿವಾರ ಬೆಳಗ್ಗೆ ಸುರಿದ ಮಳೆ ಭೂಮಿಗೆ ತಂಪೆರೆದಿದೆ.
ಕನಕಗಿರಿಯ ಮಳೆಯಾಸರೆ ಪ್ರದೇಶಗಳಲ್ಲಿ ವರುಣನ ಆಗಮನ ಬೀಜ ಬಿತ್ತನೆಗೆ ಪೂರಕವಾಗಿದೆ. ಸಿದ್ದಾಪುರ, ಮರಳಿ, ಆನೆಗೊಂದಿ, ವೆಂಕಟಗಿರಿ, ಕನಕಗಿರಿ, ಕಾರಟಗಿ, ಹುಲಿ ಹೈದರ ಹೋಬಳಿಯ ನಾನಾ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.