ಕರ್ನಾಟಕ

karnataka

By

Published : Jan 28, 2020, 1:07 PM IST

ETV Bharat / state

ಆನ್​ಲೈನ್​​ ಪರೀಕ್ಷೆ ನಿಷೇಧಿಸುವಂತೆ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಐಟಿಐ ಕೋರ್ಸಿಗೆ ಸರ್ಕಾರ ಆನ್​ಲೈನ್​ ಪರೀಕ್ಷೆ ಜಾರಿಗೆ ತಂದಿದ್ದು, ಈ ಪರೀಕ್ಷಾ ಪದ್ಧತಿ ಅವೈಜ್ಞಾನಿಕವಾಗಿದೆ. ಹಾಗಾಗಿ ಕೂಡಲೇ ಈ ಪರೀಕ್ಷಾ ಪದ್ಧತಿಯನ್ನು ನಿಷೇಧಿಸುವಂತೆ ಪ್ರತಿಭಟನೆ ನಡೆಸಿದರು.

Protest by students
ಪ್ರತಿಭಟನಾನಿರತ ವಿದ್ಯಾರ್ಥಿಗಳು

ಕೊಪ್ಪಳ:ಐಟಿಐ ಕೋರ್ಸಿನ ಆನ್​ಲೈನ್​ ಪರೀಕ್ಷಾ ಪದ್ಧತಿ ರದ್ದುಗೊಳಿಸುವಂತೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಇಂದು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಶ್ರೀ ಗವಿಸಿದ್ದೇಶ್ವರ ಮಠದ ಆವರಣದಿಂದ ಪ್ರತಿಭಟನಾ ಮೆರವಣಿಗೆ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಡಳಿತ ಭವನದವರೆಗೆ‌ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾನಿರತ ವಿದ್ಯಾರ್ಥಿಗಳು

ಯಾವುದೇ ಕೋರ್ಸಿಗೆ ಸಹ ಆನ್​​ಲೈನ್ ಪರೀಕ್ಷೆ ಇಲ್ಲ. ಆದರೆ, ಐಟಿಐಗೆ ಮಾತ್ರ ಯಾಕೆ ಆನ್​​ಲೈನ್​​ ಪರೀಕ್ಷಾ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆನ್​ಲೈನ್ ಪರೀಕ್ಷೆ ನಡೆಸಬೇಕಿದ್ದರೆ ಸಾಕಷ್ಟು ಕಂಪ್ಯೂಟರ್ ಜ್ಞಾನದ ಅವಶ್ಯಕತೆ ಇದೆ. ಈ ಸೌಲಭ್ಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಇಲ್ಲ. ಇದೊಂದು ಅವೈಜ್ಞಾನಿಕ ಪರೀಕ್ಷಾ ಪದ್ಧತಿ. ಆದ್ದರಿಂದ ಈ ಕೂಡಲೇ ಇದನ್ನು ರದ್ದುಪಡಿಸುವಂತೆ ಆಗ್ರಹಿಸಿದರು.

ಉದ್ಯೋಗ ಹಾಗೂ ತರಬೇತಿ ಇಲಾಖೆಯ ವತಿಯಿಂದ ಈಗಾಗಲೇ ಎಸ್ಸಿ/ಎಸ್ಟಿ ತರಬೇತುದಾರರಿಗೆ ಉಚಿತ ಲ್ಯಾಪ್​​ಟಾಪ್​​ ಹಾಗೂ ಇತರೆ ವಸ್ತುಗಳನ್ನು ವಿತರಿಸಲಾಗುತ್ತಿದೆ. ಅದೇ ರೀತಿಯಾಗಿ ಉಳಿದ ಸಮುದಾಯದ ಎಲ್ಲಾ ತರಬೇತುದಾರರಿಗೆ ಲ್ಯಾಪ್​ಟಾಪ್​​ ಹಾಗೂ ಇತರೆ ವಸ್ತುಗಳನ್ನು ಸರ್ಕಾರ ವಿತರಿಸಲು ಮುಂದಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ABOUT THE AUTHOR

...view details