ಕರ್ನಾಟಕ

karnataka

By

Published : Dec 21, 2019, 9:45 AM IST

Updated : Dec 21, 2019, 10:46 AM IST

ETV Bharat / state

ಇಂದು ಕೊಪ್ಪಳದ ಈದ್ಗಾ ಮೈದಾನದಲ್ಲಿ ಪೌರತ್ವ ಪ್ರತಿಭಟನೆ: ಬಿಗಿ ಪೊಲೀಸ್​​​​​ ಬಂದೋಬಸ್ತ್​​​

ಕೇಂದ್ರದ ಸಿಎಎ ಮತ್ತು ಎನ್​ಆರ್​ಸಿ ವಿರುದ್ಧ ಕೊಪ್ಪಳದ ಈದ್ಗಾ ಮೈದಾನದಲ್ಲಿ ಇಂದು ಪ್ರತಿಭಟನೆ ನಡೆಯಲಿದೆ.

koppala
ಬಿಗಿ ಬಂದೋಬಸ್ತ್​​

ಕೊಪ್ಪಳ: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಿಎಎ ಹಾಗೂ ಎನ್​ಆರ್​ಸಿ ವಿರೋಧಿ ಒಕ್ಕೂಟ ನಗರದಲ್ಲಿ ಇಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.

ಕೊಪ್ಪಳದಲ್ಲಿ ಬಿಗಿ ಬಂದೋಬಸ್ತ್​​

ನಗರದ ನಗರಸಭೆ ಬಳಿ ಇರುವ ಈದ್ಗಾ ಮೈದಾನದಲ್ಲಿ ಪ್ರತಿಭಟನೆ ನಡೆಯಲಿದೆ. ಬೆಳಗ್ಗೆ 10.30ಕ್ಕೆ ಈ ಬೃಹತ್ ಪ್ರತಿಭಟನೆ ನಡೆಯಲಿದ್ದು, ಜಿಲ್ಲಾಧಿಕಾರಿಗಳಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಲಿದ್ದಾರೆ. ಈ ಮೊದಲು ಪ್ರತಿಭಟನಾ ಮೆರವಣಿಗೆಯನ್ನು ಗಡಿಯಾರ ಕಂಬ ಸರ್ಕಲ್‌ನಿಂದ ಅಶೋಕ ಸರ್ಕಲ್​ವರೆಗೆ ನಡೆಸಲು ಸಂಘಟನೆ ಮುಖಂಡರು ಉದ್ದೇಶಿಸಿದ್ದರು.

ಆದರೆ, ನಾಳೆ ಮಧ್ಯರಾತ್ರಿಯವರೆಗೂ 144 ಸೆಕ್ಷನ್ ಜಾರಿಯಲ್ಲಿರುವುದರಿಂದ ಪೊಲೀಸರು ಮೆರವಣಿಗೆಗೆ ಅವಕಾಶ ನೀಡಿಲ್ಲ. ಹೀಗಾಗಿ, ಈದ್ಗಾ ಮೈದಾನದಲ್ಲಿ ಪ್ರತಿಭಟನಾಕಾರುರು ಸೇರಿ ಪ್ರತಿಭಟನೆ ಹಾಗೂ ಬಹಿರಂಗ ಸಭೆ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಈದ್ಗಾ ಮೈದಾನದ ಬಳಿ ಹಾಗೂ ನಗರದ ವಿವಿಧ‌ ಕಡೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ಈದ್ಗಾ ಮೈದಾನದಲ್ಲಿ ಹಾಗೂ ನಗರದ ವಿವಿಧೆಡೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸುಮಾರು 300 ಜನ ಪೊಲೀಸ್ ಹಾಗೂ ಗೃಹರಕ್ಷಕ ದಳ ಸಿಬ್ಬಂದಿ, ಇಬ್ಬರು ಡಿವೈಎಸ್ಪಿ, 6 ಸಿಪಿಐ, 13 ಪಿಎಸ್ಐ ಹಾಗೂ ಒಂದು ಕೆಎಸ್​​ಆರ್​ಪಿ ತುಕಡಿ, ಡಿಎಆರ್ ತುಕಡಿ ಭದ್ರಗೆತೆ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ಜರುಗದಂತೆ ಖಾಕಿಪಡೆ ಹದ್ದಿನ ಕಣ್ಣಿಟ್ಟಿದೆ.

Last Updated : Dec 21, 2019, 10:46 AM IST

ABOUT THE AUTHOR

...view details