ಕುಷ್ಟಗಿ (ಕೊಪ್ಪಳ):ಪಟ್ಟಣದ ಕಿರಾಣಿ ಅಂಗಡಿ, ತರಕಾರಿ ಮಾರುಕಟ್ಟೆ, ಬ್ಯಾಂಕುಗಳಲ್ಲಿ ಸಾಮಾಜಿಕ ಅಂತರ ಉಲ್ಲಂಘಿಸುತ್ತಿರುವ ಕುರಿತು ವರದಿಯಾಗುತ್ತಿದೆ. ಹಾಗೆ ಪಟ್ಟಣದ ಖಾಸಗಿ ಆಸ್ಪತ್ರೆಯೂ ಸಾಮಾಜಿಕ ಅಂತರ ಮರೆತಿರುವುದು ವರದಿಯಾಗಿದೆ.
ಸಾಮಾಜಿಕ ಅಂತರ ಮರೆತ ಖಾಸಗಿ ಆಸ್ಪತ್ರೆ: ಟೋಕನ್ಗೆ ಉದ್ದುದ್ದ ಸಾಲು - social distence
ಕೊರೊನಾ ತಡೆಗಟ್ಟಲು ಮೊದಲ ಹೆಜ್ಜೆ ಎಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಾಗಿದೆ. ಈಗಾಗಲೇ ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜಿಲ್ಲಾಡಳಿತ, ತಾಲೂಕು ಆಡಳಿತಗಳು ಶ್ರಮವಹಿಸಿ ಜಾಗೃತಿ ಮೂಡಿಸುತ್ತಿವೆ. ಆದರೆ, ಕುಷ್ಟಗಿಯ ಖಾಸಗಿ ಆಸ್ಪತ್ರೆಯಲ್ಲಿಯೇ ಸಾಮಾಜಿಕ ಅಂತರ ಮರೆತು ಜನ ಸಂದಣಿ ಏರ್ಪಟ್ಟಿರುವ ಘಟನೆ ವರದಿಯಾಗಿದೆ.
ಸಾಮಾಜಿಕ ಅಂತರ ಮರೆತ ಖಾಸಗಿ ಆಸ್ಪತ್ರೆ: ಟೋಕನ್ ಪಡೆಯಲು ಜನರ ಉದ್ದುದ್ದ ಸಾಲು
ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಕ್ಕಾಗಿ ಟೋಕನ್ ಪಡೆಯಲು ಈ ಉದ್ದದ ಸಾಲಿನಲ್ಲಿ ನಿಂತು, ಸಾಮಾಜಿಕ ಅಂತರ ಉಲ್ಲಂಘಿಸಿರುವುದು ಕಂಡುಬಂತು. ಆಸ್ಪತ್ರೆಯವರೇ ಹೀಗಾದರೆ ಹೇಗೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.