ಕರ್ನಾಟಕ

karnataka

ETV Bharat / state

ಸಿಎಂ ನಿಧಿಗೆ 25 ಸಾವಿರ ಚೆಕ್​ ನೀಡಿದ ಶಿಕ್ಷಕರು - cm relief fund

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಸಿಎಂ ಪರಿಹಾರ ನಿಧಿಗೆ 25 ಸಾವಿರ ರೂಪಾಯಿ ನೀಡಲಾಯಿತು.

primary school teachers contribute to cm relief found
ಸಿಎಂ ನಿಧಿಗೆ 25 ಸಾವಿರ ಚೆಕ್​ ನೀಡಿದ ಶಿಕ್ಷಕರು

By

Published : Mar 29, 2020, 10:53 PM IST

ಗಂಗಾವತಿ: ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಸಿಎಂ ಪರಿಹಾರ ನಿಧಿಗೆ 25 ಸಾವಿರ ರೂಪಾಯಿ ಪರಿಹಾರ ಚೆಕ್​ ಅನ್ನು ​ ಸಂಘದ ಅಧ್ಯಕ್ಷ ಅಮರೇಶ ಮೈಲಾಪುರ ಶಾಸಕ ಪರಣ್ಣ ಮುನವಳ್ಳಿ ಮೂಲಕ ಸರ್ಕಾರಕ್ಕೆ ನೀಡಿದರು.

ಸಿಎಂ ನಿಧಿಗೆ 25 ಸಾವಿರ ರೂ. ಚೆಕ್​ ನೀಡಿದ ಶಿಕ್ಷಕರು

ಕೊರೊನಾ ಸೋಂಕಿನ ಭೀತಿಯಿಂದಾಗಿ ಇಡೀ ದೇಶ ಲಾಕ್​ಡೌನ್​ ಆಗಿದ್ದು, ತುರ್ತು ಪರಿಹಾರ ಮತ್ತು ಬಡವರಿಗೆ ಅನುಕೂಲ ಕಲ್ಪಿಸುವ ಉದ್ದೇಶಕ್ಕೆ ಸಂಘದಿಂದ ಹಣ ನೀಡಲಾಗುತ್ತಿದೆ. ಅನೇಕ ಬಡ ಜನರು, ನಿರ್ಗತಿಕರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಸನ್ನಿವೇಶ ನಿರ್ಮಾಣವಾಗಿದೆ. ಸರ್ಕಾರ ಅವರಿಗೆ ಶೀಘ್ರವೇ ನೆರವಿಗೆ ಧಾವಿಸಲಿ ಎಂದು ಸಂಘದಿಂದ ನೆರವು ನೀಡುತ್ತಿದ್ದೇವೆ ಎಂದರು.

ಪದಾಧಿಕಾರಿಗಳಾದ ಛಾಯಪ್ಪ, ಶರಣಪ್ಪ ಹಕ್ಕಂಡಿ, ಹಂಪನಗೌಡ ಇದ್ದರು.

ABOUT THE AUTHOR

...view details