ಕುಷ್ಟಗಿ: ತಾಲೂಕಿನಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೋಮ್ಐಸೋಲೇಷನ್ಗೆ ಸೂಕ್ತವಾಗಿದ್ದಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗುವುದು ತಹಶೀಲ್ದಾರ ಎಂ.ಸಿದ್ದೇಶ ಹೇಳಿದರು.
ಸೋಂಕಿತರ ಹೋಮ್ ಐಸೋಲೇಷನ್ಗೆ ಆದ್ಯತೆ: ತಹಶೀಲ್ದಾರ
ಒಂದೇ ಮನೆಯಲ್ಲಿ ಎಲ್ಲಾ ಸದಸ್ಯರಿಗೆ ಕೊರೊನಾ ದೃಢವಾದರೆ ಅಂತಹವರನ್ನು ಮನೆಯಲ್ಲೇ ಐಸೋಲೇಷನ್ ಮಾಡಲಾಗುವುದು ಎಂದು ತಹಶೀಲ್ದಾರ ಎಂ.ಸಿದ್ದೇಶ ತಿಳಿಸಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಪಾಸಿಟಿವ್ ಸೋಂಕಿತರು ಹೋಮ್ ಐಸೋಲೇಷನ್ ಇಚ್ಛಿಸಿದಲ್ಲಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನದ ಅನ್ವಯ ತಾವು ಹಾಗೂ ತಾಲೂಕು ವೈದ್ಯಾಧಿಕಾರಿಗಳು ಹೋಮ್ ಐಸೋಲೇಶನ್ಗೆ ಸೂಕ್ತವೇ? ಎನ್ನುವುದನ್ನು ಗಮನಿಸಿ ಪ್ರತ್ಯೇಕ ಶೌಚಾಲಯ, ಸ್ನಾನ ಗೃಹ, ಅಡುಗೆ ಕೋಣೆ ಹಾಗೂ ಬೆಡ ರೂಮ್ ಸೂಕ್ತ ವ್ಯವಸ್ಥೆ ಇದ್ದರೆ ಕ್ರಮ ಕೈಗೊಳ್ಳಲಾಗುತ್ತಿದೆ. ಒಂದೇ ಮನೆಯಲ್ಲಿ ಎಲ್ಲಾ ಸದಸ್ಯರಿಗೆ ಕೊರೊನಾ ದೃಢವಾದರೆ ಅಂತಹವರನ್ನು ಮನೆಯಲ್ಲೇ ಐಸೋಲೇಷನ್ ಮಾಡಲಾಗುವುದು. ಈಗಾಗಲೇ ಕುಷ್ಟಗಿ ತಾಲೂಕಿನ 5 ಜನರನ್ನು ಹೋಮ್ ಐಸೋಲೇಷನ್ನಲ್ಲಿ ಇಡಲಾಗಿದೆ.
ತಾಲೂಕಿನಲ್ಲಿ ದಿನೇ ದಿನೆ ಕೊರೊನಾ ಸೋಂಕಿನ ಪ್ರಕರಣ ಹೆಚ್ಚುತ್ತಿದ್ದು, ಈ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರದ ಮುಂಜಾಗ್ರತೆ ಅಗತ್ಯವಾಗಿರುತ್ತದೆ. ಸೋಂಕು ಬಾರದಂತೆ ಸ್ವಯಂ ನಿರ್ಬಂಧ ಹಾಕಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.