ಗಂಗಾವತಿ: ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುತ್ತಿದ್ದ ಇಲ್ಲಿನ ಗ್ರಾಮ ದೇವತೆ ದುರ್ಗಮ್ಮ ದೇವಿಯ ಜಾತ್ರೆಯನ್ನು ಕೊರೊನಾ ಹಿನ್ನೆಲೆ ಐದು ವರ್ಷಕ್ಕೆ ಮುಂದೂಡುವಂತೆ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ನಿರ್ಧರಿಸಿದ್ದಾರೆ.
ಕೊರೊನಾ ಎಫೆಕ್ಟ್: ದುರ್ಗಮ್ಮ ದೇವಿ ಜಾತ್ರೆ ಮುಂದೂಡಿಕೆ
ಕೊರೊನಾ ವೈರಸ್ ವ್ಯಾಪಕವಾಗಿ ಸಮುದಾಯದಲ್ಲಿ ಹರಡುತ್ತಿರುವ ಹಿನ್ನೆಲೆ ಈ ವರ್ಷ ಗಂಗಾವತಿಯಲ್ಲಿ ನಡೆಯಬೇಕಿದ್ದ ದುರ್ಗಮ್ಮ ದೇವಿ ಜಾತ್ರೆಯನ್ನು 2022ಕ್ಕೆ ಮುಂದೂಡಲಾಗಿದೆ.
18 ಸಮಾಜದ ಮುಖಂಡರ ನೇತೃತ್ವದಲ್ಲಿರುವ ದೇಗುಲದ ಸಮಿತಿಯು, ಮಾಜಿ ಸಂಸದ ಹೆಚ್.ಜಿ. ರಾಮುಲು ನೇತೃತ್ವದಲ್ಲಿ ಸಭೆ ಸೇರಿ ಇದೇ ವರ್ಷದ ಎಳ್ಳು ಅಮಾವಾಸ್ಯೆಯೆಂದು ನಡೆಯಬೇಕಿದ್ದ ಉತ್ಸವ ಜಾತ್ರೆಯನ್ನು ಮುಂದೂಡಿದರು. ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಸ್ಥಗಿತವಾಗಿದ್ದ ಗ್ರಾಮ ದೇವತೆಯ ಉತ್ಸವ ಹಾಗೂ ಜಾತ್ರೆಯನ್ನು 2011ರಲ್ಲಿ ಪುನಃ ಆರಂಭಿಸಲಾಗಿತ್ತು. ಬಳಿಕ 2014 ಹಾಗೂ 2017 ರಲ್ಲಿ ಜಾತ್ರೆ ಮಾಡಲಾಗಿತ್ತು. ಇದೇ ವರ್ಷ ಎಳ್ಳು ಅಮಾವಾಸ್ಯೆಯಂದು ಪುನಃ ಜಾತ್ರೆ ಮಾಡಲು ಹಿಂದೆಯೇ ತೀರ್ಮಾನಿಸಲಾಗಿತ್ತು.
ಕೊರೊನಾ ವೈರಸ್ ವ್ಯಾಪಕವಾಗಿ ಸಮುದಾಯದಲ್ಲಿ ಹರಡುತ್ತಿರುವ ಹಿನ್ನೆಲೆ ಗ್ರಾಮ ದೇವತೆಯ ಉತ್ಸವವನ್ನು ರದ್ದು ಮಾಡಿ ಪುನಃ 2022 ಕ್ಕೆ ಉತ್ಸವ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಚಾಲಕ ಜೋಗದ ನಾರಾಯಣಪ್ಪ ನಾಯಕ್ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.