ಕರ್ನಾಟಕ

karnataka

ETV Bharat / state

ಇಡೀ ಗಂಗಾವತಿಗೆ ಒಂದೇ ಆಧಾರ್​​ ಕಾರ್ಡ್​ ತಿದ್ದುಪಡಿ ಕೇಂದ್ರ; ಸಂಕಷ್ಟದಲ್ಲಿ ಜನತೆ

ಕೊರೊನಾ ಹಿನ್ನೆಲೆ ಸರ್ಕಾರ ಘೋಷಣೆ ಮಾಡಿರುವ ಪರಿಹಾರ ಧನ ಪಡೆಯಲು ಆಧಾರ್​​​ಕಾರ್ಡ್ ಕಡ್ಡಾಯವಾಗಿದೆ. ಈ ಹಿನ್ನೆಲೆ ತಾಲೂಕಿನ ಜನ ಆಧಾರ್ ಕಾರ್ಡ್ ತಿದ್ದುಪಡಿ ಕೇಂದ್ರದ ಮುಂದೆ ಸಾಲುಗಟ್ಟಿ ನಿಂತಿದ್ದು, ಜನಸಂದಣಿ ಕಂಡುಬಂದಿದೆ.

People's lined for Aadhaar card correction ... queue from early morning
ಆಧಾರ್​​ ಕಾರ್ಡ್​ ತಿದ್ದುಪಡಿಗೆ ಜನರ ಪರದಾಟ...ಬೆಳಗ್ಗೆಯಿಂದಲೇ ಸರದಿ ಸಾಲು

By

Published : Jul 11, 2020, 8:02 PM IST

ಗಂಗಾವತಿ (ಕೊಪ್ಪಳ): ಆಧಾರ್ ಕಾರ್ಡ್​​​​ನಲ್ಲಿ ತಿದ್ದುಪಡಿ ಹಾಗೂ ಬದಲಾವಣೆ ಮಾಡಿಸಿಕೊಳ್ಳಲು ಬಯಸುವ ಜನ ಇಲ್ಲಿನ ಆಧಾರ್ ಸೇವಾ ಕೇಂದ್ರದ ಮುಂದೆ ಬೆಳಗ್ಗೆ 5 ಗಂಟೆಯಿಂದಲೇ ಅನ್ನಾಹಾರ, ದೈನಿಕ ಕಾರ್ಯ ಬಿಟ್ಟು, ಹೆಚ್ಚಾಗಿ ಸಾಮಾಜಿಕ ಅಂತರವಿಲ್ಲದೆ ಸಾಲುಗಟ್ಟಿ ನಿಂತಿದ್ದ ಘಟನೆ ನಡೆದಿದೆ.

ಆಧಾರ್​​ ಕಾರ್ಡ್​ ತಿದ್ದುಪಡಿಗೆ ಜನರ ಪರದಾಟ...ಬೆಳಗ್ಗೆಯಿಂದಲೇ ಸರದಿ ಸಾಲು

ಇಡಿ ನಗರದ 35 ವಾರ್ಡ್​​ನ ಪೈಕಿ ಇಲ್ಲಿನ ನೀಲಕಂಠೇಶ್ವರ ವೃತ್ತದಲ್ಲಿರುವ ಪ್ರಗತಿ ಕೃಷ್ಣ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್​​​​​​ ಕೇಂದ್ರಕ್ಕೆ ಮಾತ್ರ ಆಧಾರ್ ಕಾರ್ಡ್​​​​ ತಿದ್ದುಪಡಿಗೆ ಅವಕಾಶ ನೀಡಿರುವುದು ಜನರ ಪರದಾಟಕ್ಕೆ ಕಾರಣವಾಗಿದೆ.

ಲಾಕ್​​​ಡೌನ್​​​ ಸಂದರ್ಭದಲ್ಲಿ ಜನ ಈಗಾಗಲೇ ತೀವ್ರ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಕೂಡ ಜನರಿಗೆ ಪರಿಹಾರ ಧನ ಘೋಷಣೆ ಮಾಡಿದೆ. ಆದರೆ ಈ ಪರಿಹಾರ ಪಡೆಯಬೇಕಾದರೆ ಆಧಾರ್ ಕಾರ್ಡ್ ಕಡ್ಡಾಯ ಮಾಡಿದ್ದು, ಇದಕ್ಕಾಗಿ ಜನ ಸಾಲುಗಟ್ಟಿ ನಿಂತಿದ್ದು ಕಂಡುಬಂದಿದೆ. ಅಲ್ಲದೆ ಈ ಸಾಲು ನಿತ್ಯವೂ ಮುಂದುವರಿದಿದೆ.

ಈ ಬಗ್ಗೆ ಜಿಲ್ಲಾಧಿಕಾರಿ ಕೂಡಲೆ ಗಮನಹರಿಸಿ ನಗರ ಮತ್ತು ಗ್ರಾಮೀಣ ಪ್ರದೇಶಕ್ಕೆ ಆಧಾರ್ ತಿದ್ದುಪಡಿ ಕೇಂದ್ರದ ಸವಲತ್ತು ಒದಗಿಸಬೇಕು ಎಂದು ಕರವೇ ಸಂಘಟನೆಯ ಪಂಪಣ್ಣ ನಾಯಕ್ ಆಗ್ರಹಿಸಿದ್ದಾರೆ.

ABOUT THE AUTHOR

...view details