ಕರ್ನಾಟಕ

karnataka

ETV Bharat / state

ಗಂಗಾವತಿಯ ಕೆಲ ಗ್ರಾಮಗಳ ಜನರಿಗೆ ಜ್ವರ, ತಲೆನೋವು: ಆರೋಗ್ಯ ಇಲಾಖೆ ನಿರ್ಲಕ್ಷ್ಯ

ಗಂಗಾವತಿ ತಾಲೂಕಿನ ಗಡ್ಡಿ, ಉಡುಮಕಲ್, ಬಂಡ್ರಾಳ್ ಮೊದಲಾದ ಗ್ರಾಮಗಳಲ್ಲಿ ಜ್ವರದಂತಹ ಮತ್ತಿತರ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಇದು ಸಾಮಾನ್ಯ ಜ್ವರವೆ ಅಥವಾ ಮಲೇರಿಯಾ, ಡೆಂಗಿ, ಟೈಪಾಯ್ಡ್ ನಂತ ಸಮಸ್ಯೆ ಎಂಬ ಭೀತಿ ಜನರಲ್ಲಿ ಮೂಡಿದೆ.

Fever
Fever

By

Published : Apr 11, 2021, 1:02 AM IST

ಗಂಗಾವತಿ: ತಾಲೂಕಿನ ವೆಂಕಟಗಿರಿ ಹೋಬಳಿಯ ಹಲವು ಗ್ರಾಮಗಳಲ್ಲಿನ ಜನರಿಗೆ ಜ್ವರ, ತಲೆನೋವು, ಮೈಕೈನೋವಿನಂತ ಲಕ್ಷಣಗಳು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಡ್ಡಿ, ಉಡುಮಕಲ್, ಬಂಡ್ರಾಳ್ ಮೊದಲಾದ ಗ್ರಾಮಗಳಲ್ಲಿ ಜ್ವರದಂತಹ ಮತ್ತಿತರ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಇದು ಸಾಮಾನ್ಯ ಜ್ವರವೆ ಅಥವಾ ಮಲೇರಿಯಾ, ಡೆಂಗಿ, ಟೈಪಾಯ್ಡ್ ನಂತ ಸಮಸ್ಯೆ ಎಂಬ ಭೀತಿ ಜನರಲ್ಲಿ ಮೂಡಿದೆ.

ಈಗಾಗಲೆ ಕೆಲವರು ವೆಂಕಟಗಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಇನ್ನು ಕೆಲವರು ಗಂಗಾವತಿಯ ಉಪ ವಿಭಾಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮತ್ತೆ ಕೆಲವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಕಳೆದ ಹಲವು ದಿನಗಳಿಂದ ಈ ಸಮಸ್ಯೆ ಕಂಡು ಬರುತ್ತಿದೆ. ಆದರೆ ಸಂಬಂಧಿತ ಆರೋಗ್ಯ ಇಲಾಖೆಯ ಅಧಿಕಾರಿಗಳಾಗಲಿ, ಗ್ರಾಮ ಪಂಚಾಯಿತಿಯ ಪಿಡಿಒಗಳಾಗಲಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿಲ್ಲ ಎಂದು ಎಐಡಿವೈಒ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶರಣುಗಡ್ಡಿ ಆರೋಪಿಸಿದ್ದಾರೆ.

ABOUT THE AUTHOR

...view details