ಗಂಗಾವತಿ: ಎಷ್ಟೇ ಕ್ರಮ ಕೈಗೊಂಡರೂ ತಾಲೂಕಿನಲ್ಲಿ ಅಕ್ರಮವಾಗಿ ನಡೆಯುತ್ತಿರುವ ಅನಧಿಕೃತ ಮರಳು, ಇತರೆ ಖನಿಜ ಸಾಗಾಣಿಕೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ವಿವಿಧ ಇಲಾಖೆಯ ಅಧಿಕಾರಿಗಳ ಚಾಲಿತದಳ ರಚಿಸಿದ್ದಾರೆ.
ಅಕ್ರಮ ಮರಳು ದಂಧೆ ತಡೆಯಲು ಕೊಪ್ಪಳ ಡಿಸಿಯಿಂದ ಹೊಸ ಐಡಿಯಾ!
ಅಕ್ರಮ ಮರಳು ದಂಧೆ ತಡೆಯಲು ಕೊಪ್ಪಳ ಜಿಲ್ಲಾಧಿಕಾರಿ ಹೊಸ ಐಡಿಯಾ ಮಾಡಿದ್ದಾರೆ. ಅಧಿಕಾರಿಗಳ ಚಾಲಿತದಳ ರಚಿಸಿ ಆ ಮೂಲಕ ಮರಳು ದಂಧೆಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ.
ಅಕ್ರಮ ಮರಳು ಸಾಗಾಣೆ ತಡೆಯಲು ಚಾಲಿತ ದಳ ರಚನೆ: ಬಳ್ಳಾರಿ ಡಿಸಿಯಿಂದ ಕ್ರಮ
ಗಂಗಾವತಿ ತಾಲೂಕಿನಲ್ಲಿ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ಸಾಗಾಣಿಕೆ, ಪಟ್ಟಾ ಜಮೀನುಗಳಲ್ಲಿ ಮರಳುಗಾರಿಕೆ ಹಾಗೂ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಸಾಕಷ್ಟು ದೂರು ಹಾಗೂ ಮಾಧ್ಯಮಗಳಲ್ಲಿ ವರದಿ ಬಂದ ಹಿನ್ನೆಲೆ ಈ ಚಾಲಿತ ದಳ ರಚಿಸಲಾಗಿದೆ.
ತಾಲೂಕು ಪಂಚಾಯಿತಿ, ಅರಣ್ಯ, ಜಲಸಂಪನ್ಮೂಲ, ಸಮಾಜ ಕಲ್ಯಾಣ ಇಲಾಖೆ, ಲೋಕೋಪಯೋಗಿ, ಆರ್ಟಿಓ ಹಾಗೂ ಪಿಡಿಒಗಳನ್ನು ಮುಖ್ಯಸ್ಥರನ್ನಾಗಿ ಮಾಡಿ ತಂಡ ರಚಿಸಿ, ಪ್ರತಿ ದಿನ ಒಬ್ಬೊಬ್ಬರ ನೇತೃತ್ವದಲ್ಲಿ ಗಸ್ತು ತಿರುಗುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
Last Updated : Dec 19, 2019, 7:54 PM IST