ಕೊಪ್ಪಳ:ಜಿಲ್ಲೆಗೆ ಇಂದು ಒಂದು ಸಾವಿರ ಟನ್ ಡಿಎಪಿ ರಸಗೊಬ್ಬರ ಬಂದಿದೆ. ರೈಲ್ವೆ ಮೂಲಕ ರಸಗೊಬ್ಬರ ಬಂದಿದೆ. ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ, ಈಗ ಮುಂಗಾರು ಹಂಗಾಮು ಬಿತ್ತನೆಗೆ ಅಗತ್ಯವಾದ ಡಿಎಪಿ ಗೊಬ್ಬರ ಬಂದಿದ್ದು ರೈತರನ್ನು ನಿರುಮ್ಮಳವಾಗಿಸಿದೆ.
ಕೊಪ್ಪಳಕ್ಕೆ ಒಂದು ಸಾವಿರ ಟನ್ ಡಿಎಪಿ ರಸಗೊಬ್ಬರ ಆಗಮನ
ಕೊಪ್ಪಳ ಜಿಲ್ಲೆಗೆ ಇಂದು 940 ಟನ್ ಡಿಎಪಿ ಹಾಗೂ 275 ಟನ್ ಕಾಂಪ್ಲೆಕ್ಸ್ ಗೊಬ್ಬರ ರೈಲು ಮೂಲಕ ಬಂದಿದೆ. ಮುಂಗಾರು ಹಂಗಾಮು ಬಿತ್ತನೆಗೆ ಜಿಲ್ಲೆಗೆ ಒಟ್ಟು 3,500 ಟನ್ ರಸಗೊಬ್ಬರ ಅಗತ್ಯವಿದೆ.
fertilizer
ಮುಂಗಾರು ಹಂಗಾಮು ಬಿತ್ತನೆಗೆ ಜಿಲ್ಲೆಗೆ ಒಟ್ಟು 3,500 ಟನ್ ರಸಗೊಬ್ಬರ ಅಗತ್ಯವಿದೆ. ಈಗಾಗಲೇ ಮಾರಾಟಗಾರರು ಹಾಗೂ ಸೊಸೈಟಿಗಳಲ್ಲಿ 2 ಸಾವಿರ ಟನ್ ರಸಗೊಬ್ಬರವಿದೆ. ಇನ್ನುಳಿದ ಅಗತ್ಯ ಗೊಬ್ಬರವನ್ನು ಸಚಿವರ ಕಾಳಜಿಯಿಂದಾಗಿ ಈಗ ಬಂದಿದೆ.
ಜಿಲ್ಲೆಗೆ ಇಂದು 940 ಟನ್ ಡಿಎಪಿ ಹಾಗೂ 275 ಟನ್ ಕಾಂಪ್ಲೆಕ್ಸ್ ಗೊಬ್ಬರ ರೈಲ್ವೆ ಮೂಲಕ ಬಂದಿದೆ. ಇದರಿಂದಾಗಿ ಜೂನ್ ತಿಂಗಳಲ್ಲಿ ಬಿತ್ತನೆಗೆ ಅಗತ್ಯವಾಗಿದ್ದ ಗೊಬ್ಬರ ಈಗ ನಮ್ಮ ಜಿಲ್ಲೆಯಲ್ಲಿದೆ ಎಂದು ಕೃಷಿ ಇಲಾಖೆಯ ಪ್ರಭಾರಿ ಜಂಟಿ ನಿರ್ದೇಶಕ ಎಲ್. ಸಿದ್ದೇಶ್ವರ ಅವರು ತಿಳಿಸಿದ್ದಾರೆ.
Last Updated : Jun 4, 2021, 9:51 PM IST