ಕರ್ನಾಟಕ

karnataka

ETV Bharat / state

ಶೌಚಾಲಯವೇ ಸೂರು: ಇಬ್ಬರು ಮಕ್ಕಳನ್ನು ಸಾಕುತ್ತಿರುವ ವೃದ್ಧೆಗೆ ದಯನೀಯ ಸ್ಥಿತಿ - ಶಾಸಕ ಹಾಲಪ್ಪ ಆಚಾರ್

ಯಲಬುರ್ಗಾ ತಾಲೂಕಿನ ಹಿರೇ ಅರಳಿಹಳ್ಳಿ ಗ್ರಾಮದ ಲಕ್ಷ್ಮವ್ವ ಎಂಬ ವೃದ್ಧೆ ಶೌಚಾಲಯದಲ್ಲಿ ಜೀವನ ಕಳೆಯುತ್ತಾ ಕೂಲಿ ನಾಲಿ ಮಾಡಿಕೊಂಡು ತನ್ನಿಬ್ಬರು ಮಕ್ಕಳನ್ನು ಸಾಕುತ್ತಿದ್ದಾಳೆ.

Old woman lives inside toilet
ಶೌಚಾಲಯದಲ್ಲೇ ಜೀವನ

By

Published : Aug 7, 2021, 9:37 AM IST

ಕೊಪ್ಪಳ: ಸ್ವಂತ ಸೂರಿಲ್ಲದೆ ಶೌಚಾಲಯದಲ್ಲೇ ಜೀವನ ಸಾಗಿಸುತ್ತ ಬದುಕಿನ ಸಂಧ್ಯಾಕಾಲದಲ್ಲಿರುವ ಅಜ್ಜಿಯೊಬ್ಬರು ದುಡಿದು ತನ್ನಿಬ್ಬರು ಮಕ್ಕಳನ್ನು ಸಾಕುತ್ತಿರುವಂತಹ ಮನಕಲಕುವ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇ ಅರಳಿಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಂಡುಬಂದಿದೆ.

ಬೀರಲದಿನ್ನಿ ಗ್ರಾಮದ ಲಕ್ಷ್ಮವ್ವ ಎಂಬ ವೃದ್ಧೆ ಮತ್ತು ಆಕೆಯ ಇಬ್ಬರು ಮಕ್ಕಳು ಶೌಚಾಲಯದಲ್ಲಿ ದಯನೀಯ ಸ್ಥಿತಿಯಲ್ಲಿ ಜೀವನ ಕಳೆಯುತ್ತಿದ್ದಾರೆ. ಲಕ್ಷ್ಮವ್ವ ಹಾಗೂ ಹೊನ್ನನಗೌಡ ದಂಪತಿಗೆ ಒಟ್ಟು ಮೂವರು ಮಕ್ಕಳು. ಆ ಪೈಕಿ ಒಬ್ಬರು ಮದುವೆ ಮಾಡಿಕೊಂಡು ಬೇರೆ ಕಡೆ ಸಂಸಾರ ಮಾಡುತ್ತಿದ್ದಾರೆ. ಹೊನ್ನಪ್ಪ ಹಾಗೂ ಕನಕಪ್ಪ ಎಂಬಿಬ್ಬರು ಮಕ್ಕಳು ಐದು ವರ್ಷದ ಹಿಂದೆ ಬೋರ್​ವೆಲ್ ಕೊರೆಸುವ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಮಾನಸಿಕ ಒತ್ತಡದಿಂದಾಗಿ ಕಳೆದ ಐದು ವರ್ಷದಿಂದ ಖಿನ್ನತೆಗೊಳಗಾಗಿದ್ದಾರೆ. ಹೀಗಾಗಿ ವೃದ್ಧೆಯೇ ಕೂಲಿನಾಲಿ ಮಾಡಿಕೊಂಡು ಮಕ್ಕಳನ್ನು ಸಾಕುತ್ತಿದ್ದಾಳೆ.

ಶೌಚಾಲಯದಲ್ಲೇ ಜೀವನ ಸಾಗಿಸುತ್ತಿರುವ ವೃದ್ಧೆ

ಕಳೆದ ಮೂರು ವರ್ಷದ ಹಿಂದೆ ಸುರಿದ ಧಾರಾಕಾರ ಮಳೆಗೆ ವೃದ್ಧೆಯ ಕುಟುಂಬ ವಾಸವಿದ್ದ ಮನೆ ಸಂಪೂರ್ಣ ಬಿದ್ದುಹೋಗಿದೆ. ವಾಸಕ್ಕೆ ಮನೆ ಇಲ್ಲದಿರುವುದಿಂದ ಮುರುಕಲು ಮನೆಯಲ್ಲಿ ವಾಸಿಸುತ್ತಿರುವ ವೃದ್ಧೆ ಅಡುಗೆ ಸಾಮಗ್ರಿಗಳನ್ನು ಮನೆಯ ಮುಂದಿನ ಶೌಚಾಲಯದಲ್ಲಿಟ್ಟುಕೊಂಡು ಬದುಕು ನಡೆಸುತ್ತಿದ್ದಾಳೆ. ವೃದ್ಧೆಯ ಮಕ್ಕಳಿಬ್ಬರು ಹೊಲದಲ್ಲಿರುವ ಪುಟ್ಟ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ.

ಒಟ್ಟಿನಲ್ಲಿ ‌ಕ್ಷೇತ್ರದ ಶಾಸಕ ಹಾಲಪ್ಪ ಆಚಾರ್ ಅವರು ಈಗ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿದ್ದಾರೆ. ವೃದ್ಧೆ ಲಕ್ಷ್ಮಮ್ಮಳ ಸ್ಥಿತಿ ಗಮನಿಸಿ ಆಶ್ರಯ ಯೋಜನೆಯಡಿ ಸೂರು ಒದಗಿಸುವ ಕೆಲಸ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details