ಕರ್ನಾಟಕ

karnataka

ETV Bharat / state

39 ವರ್ಷಗಳಿಂದ ಜಾತ್ರೆಗೆ ಬ್ರೇಕ್​ ಹಾಕಿದ್ದ ಗ್ರಾಮಸ್ಥರು... ಕಾರಣ ಏನ್​ ಗೊತ್ತಾ? - ಕೊಪ್ಪಳ

ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಬರೋಬ್ಬರಿ 39 ವರ್ಷಗಳ ಬಳಿಕ ಜಾತ್ರೆಯ ಸಂಭ್ರಮ ಮಾಡಿದೆ. ಸಕಲ ಸಿದ್ಧತೆಗಳೊಂದಿಗೆ ಮೇ 7 ರಿಂದ 15ರವರೆಗೆ ಜಾತ್ರೆ ಜರುಗಲಿದೆ. ಗ್ರಾಮದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಲಾಗುತ್ತಿದೆ.

ಗ್ರಾಮ ದೇವತೆ ಜಾತ್ರೆ

By

Published : May 5, 2019, 2:53 PM IST

ಕೊಪ್ಪಳ:ಈ ಗ್ರಾಮ ದೇವತೆಯ ದ್ಯಾಮಮ್ಮನ ಜಾತ್ರೆ ಜರುಗಿ 39 ವರ್ಷಗಳೇ ಕಳೆದಿವೆ. ಕಟ್ಟುನಿಟ್ಟಿನ ಆಚರಣೆ ಪಾಲಿಸಲು ಆಗುವುದಿಲ್ಲವೆಂದು ಜಾತ್ರೆಯನ್ನು ಆಚರಿಸಿರಲಿಲ್ಲ. ಈಗ ಗ್ರಾಮದ ಮುಖಂಡರೆಲ್ಲ ಸೇರಿಕೊಂಡು ಮತ್ತೆ ಗ್ರಾಮದ ಆರಾಧ್ಯ ದೇವತೆಯಾದ ದ್ಯಾಮಮ್ಮನ ಜಾತ್ರೆಗೆ ಸಜ್ಜಾಗಿದ್ದಾರೆ.

ಹೌದು, ಕೊಪ್ಪಳ ತಾಲೂಕು ಹಲಗೇರಿ ಗ್ರಾಮದ ದ್ಯಾಮಮ್ಮ ಮತ್ತು ದುರ್ಗಮ್ಮ ದೇವತೆಯ ಕಟ್ಟು ನಿಟ್ಟಿನ ಆಚರಣೆಯಲ್ಲಿ ಯಾವುದೇ ವ್ಯತ್ಯಾಸವಾಗುವಂತಿಲ್ಲ. ಅದಕ್ಕಾಗಿಯೇ 39 ವರ್ಷಗಳಿಂದ ಆಚರಿಸದೇ ಹಾಗೇ ಬಿಡಲಾಗಿತ್ತು. ಈಗ ಗ್ರಾಮದ ಜನರ ಮನೆ, ಮನಗಳಲ್ಲಿ ಹಬ್ಬದ ವಾತಾವರಣ ಮಾಡಿದೆ. ಇದೇ ಮೇ 7ರಿಂದ 15ರವರೆಗೆ ಜಾತ್ರೆ ನಡೆಯಲಿದೆ.

ಗ್ರಾಮ ದೇವತೆಗಳ ಜಾತ್ರೆಗಳನ್ನು ಸಾಮಾನ್ಯವಾಗಿ ಮೂರು, ಐದು ಅಥವಾ ಒಂಬತ್ತು ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ. ಗ್ರಾಮದ ಮುಖಂಡರೆಲ್ಲ ಸೇರಿಕೊಂಡು ಜಾತ್ರೆ ಆಚರಿಸಲು ಮುಂದಾಗಿರುವುದು ಜನರಲ್ಲಿ ಸಂತಸ ತಂದಿದೆ. ಜಾತ್ರೆಯ ಸಂದರ್ಭದಲ್ಲಿ ಪಾಲಿಸಬೇಕಾದ ಕ್ರಮಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಗ್ರಾಮದ ಹಿರಿಯರಾದ ಗುರುನಗೌಡ ಪಾಟೀಲ್ ಹೇಳಿದರು.

ಗ್ರಾಮ ದೇವತೆ ಜಾತ್ರೆ

ಈ ಬಾರಿ ಹೊಸ ರಥ ನಿರ್ಮಾಣ ಮಾಡಲಾಗಿದ್ದು ರಥೋತ್ಸವವೂ ವಿಜೃಂಭಣೆಯಿಂದ ಜರುಗಲಿದೆ. 9 ದಿನ ನಡೆಯುವ ಜಾತ್ರೆಯ ಕಾರ್ಯಕ್ರಮಗಳಲ್ಲಿ ದಶಮಿ ದಿಂಡಿನಲ್ಲಿ ಅಮ್ಮನವರ ಮೂರ್ತಿ ಮೆರವಣಿಗೆ, ರಥೋತ್ಸವ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎನ್ನುತ್ತಾರೆ ಬಸವನಗೌಡ ಪಾಟೀಲ್.

ABOUT THE AUTHOR

...view details