ಗಂಗಾವತಿ:ಇಲ್ಲಿನ ಜಯನಗರದ ಸತ್ಯನಾರಾಯಣ ಪೇಟೆಯಲ್ಲಿರುವ ಉತ್ತರ ಕರ್ನಾಟಕದ ಏಕೈಕ ಸಂಸ್ಕೃತ ವೇದಪಾಠ ಶಾಲೆ ವಿಜಯಧ್ವಜ ವಿದ್ಯಾಪೀಠದಲ್ಲಿ ಪ್ರಸಕ್ತ ಸಾಲಿನ ಪ್ರವೇಶ ಆರಂಭವಾಗಿದೆ. ಆಸಕ್ತರು ಮುಕ್ತವಾಗಿ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥರ ನೇತೃತ್ವದಲ್ಲಿ ಆರಂಭವಾಗಿದ್ದ ಈ ವೇದಪಾಠ ಶಾಲೆಯಲ್ಲಿ ಎಂಟರಿಂದ ಹದಿನಾಲ್ಕು ವರ್ಷದೊಳಗಿನ ಮಕ್ಕಳಿಗೆ ಉಚಿತ ವಸತಿ, ಊಟ, ಶಿಕ್ಷಣ ಹಾಗೂ ಸಂಸ್ಕೃತ, ವೇದಾಂತ, ಜ್ಯೋತಿಷ್ಯ, ತರ್ಕ ಶಾಸ್ತ್ರಗಳನ್ನು ಉಚಿತವಾಗಿ ಕಲಿಸಿಕೊಡಲಾಗುತ್ತಿದೆ.
ಸಂಸ್ಕೃತ ವೇದ ಪಾಠ ಶಾಲೆಗೆ ಪ್ರವೇಶ ಪಡೆಯಲು ಮುಕ್ತ ಅವಕಾಶ ದಕ್ಷಿಣ ಭಾರತದಲ್ಲಿ ಪೇಜಾವರ ಪೀಠದಿಂದ ಹೈದರಾಬಾದ್, ಚೆನ್ನೈ, ಬೆಂಗಳೂರು ಮತ್ತು ಗಂಗಾವತಿಯಲ್ಲಿ ಈ ನಾಲ್ಕು ಸ್ಥಳಗಳಲ್ಲಿ ಮಾತ್ರ ವೇದಪಾಠ ಶಾಲೆ ಆರಂಭಿಸಲಾಗಿದೆ. ಈಗಾಗಲೇ ಗಂಗಾವತಿಯಲ್ಲಿ ಅಸಂಖ್ಯಾತ ವಿದ್ಯಾರ್ಥಿಗಳು ವೇದ, ಸಂಸ್ಕೃತ ಶಿಕ್ಷಣ ಮುಗಿಸಿದ್ದಾರೆ.
ಪೌರೋಹಿತ್ಯ, ವೇದ, ಸಂಸ್ಕೃತ, ತರ್ಕಶಾಸ್ತ್ರದೊಂದಿಗೆ ಅಧುನಿಕ ಶಿಕ್ಷಣವನ್ನು ಬಾಹ್ಯವಾಗಿ ಮಕ್ಕಳಿಗೆ ಕೊಡಿಸುವ ವ್ಯವಸ್ಥೆಯನ್ನು ವಿಜಯಧ್ವಜ ವಿದ್ಯಾಪೀಠ ಮಾಡುತ್ತಿದೆ. ಮಕ್ಕಳನ್ನು ಪೀಠಕ್ಕೆ ಸೇರಿಸಲು ಬಯಸುವ ಆಸಕ್ತ ಪಾಲಕರು ಈ ಸಂಖ್ಯೆ- 9844126812 ಮೂಲಕ ಸಂಪರ್ಕಿಸಬಹುದು.