ಕರ್ನಾಟಕ

karnataka

ETV Bharat / state

'ಹೆಚ್ಚು ಕೋವಿಡ್ ಕೇರ್ ಸೆಂಟರ್ ತೆರೆಯಿರಿ, ಸಂಪೂರ್ಣ ಲಾಕ್‌ಡೌನ್ ಬೇಡ' - ಸಂಸದ ಸಂಗಣ್ಣ ಕರಡಿ

ಕಳೆದ ಬಾರಿಯಂತೆ ಈ ಬಾರಿ ಹೆಚ್ಚು ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆಯಬೇಕು. ಅಲ್ಲಿಗೆ ಸೋಂಕಿತರನ್ನು ಶಿಫ್ಟ್ ಮಾಡಬೇಕು. ಲಾಕ್​​ಡೌನ್ ಮಾಡಿದರೆ ಆರ್ಥಿಕ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಸಂಸದ ಸಂಗಣ್ಣ ಕರಡಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಸಂಸದ ಸಂಗಣ್ಣ ಕರಡಿ  ಹೇಳಿಕೆ
ಸಂಸದ ಸಂಗಣ್ಣ ಕರಡಿ ಹೇಳಿಕೆ

By

Published : May 7, 2021, 7:06 AM IST

ಕೊಪ್ಪಳ:ಕೊರೊನಾ ನಿಯಂತ್ರಿಸಲು ರಾಜ್ಯವನ್ನು ಸಂಪೂರ್ಣ ಲಾಕ್‌ಡೌನ್ ಮಾಡಿದರೆ ಜನಜೀವನ ಅಸ್ತವ್ಯಸ್ತವಾಗುತ್ತದೆ ಎಂದು ಸಂಸದ ಸಂಗಣ್ಣ ಕರಡಿ ಆತಂಕ ವ್ಯಕ್ತಪಡಿಸಿದ್ದಾರೆ.

ಸಂಸದ ಸಂಗಣ್ಣ ಕರಡಿ

ನಗರದ ತಮ್ಮ ಗೃಹಕಚೇರಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿಗಿಂತ ಈ ಬಾರಿ ಹೋಂ ಐಸೋಲೇಶನ್‌ಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಇದರಿಂದಾಗಿ ಸಣ್ಣ ಸಣ್ಣ ಮನೆಯಲ್ಲಿ ತೊಂದರೆಯಾಗುತ್ತದೆ. ಪರಿಣಾಮ ಹೆಚ್ಚು ಪಾಸಿಟಿವ್ ಪ್ರಕರಣಗಳು ಬರುತ್ತಿವೆ ಎಂದರು.

ಹೆಚ್ಚು ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆದು ಅಲ್ಲಿಗೆ ಸೋಂಕಿತರನ್ನು ಶಿಫ್ಟ್ ಮಾಡಬೇಕು. ಲಾಕ್​​ಡೌನ್ ಮಾಡಿದರೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಎಲ್ಲ ಆರ್ಥಿಕ ಚಟುವಟಿಕೆಗಳೂ ನಿಂತು ಹೋಗುತ್ತವೆ. ಈಗಿರುವ ಕೊರೊನಾ ಕರ್ಫ್ಯೂ ಸಮಯವನ್ನು ಕಡಿಮೆ ಮಾಡಬೇಕು. ಜನರೂ ಸಹ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲರೂ ಒಂದೇ ಬಾರಿ ಮಾರುಕಟ್ಟೆಗೆ ಬರಬಾರದು ಎಂದು ಸಂಸದರು ಜನರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ: ಲಸಿಕೆ ಕೊರತೆಯ ದೂರಿಲ್ಲ, ಸರತಿ ಸಾಲುಗಳಿಲ್ಲ: ಭುಜ್​​ನಲ್ಲಿ 'ಮಾದರಿ' ವ್ಯಾಕ್ಸಿನೇಷನ್​​

ABOUT THE AUTHOR

...view details