ಕೊಪ್ಪಳ :ನಮಗೆ ಯತ್ನಾಳ್ ಅವರೇ ಕಾಂಗ್ರೆಸ್ ಪಾರ್ಟಿಯಾಗಿ ಬಿಟ್ಟಿದ್ದಾರೆ ಎಂದು ರಾಯಚೂರು ನಗರ ಶಾಸಕ ಡಾ. ಶಿವರಾಜ ಪಾಟೀಲ್ ಹೇಳಿದ್ದಾರೆ. ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್ನವರು ಸುಮ್ಮನಿದ್ದಾರೆ. ನಮಗೆ ಯತ್ನಾಳ್ ಒಬ್ಬರೇ ಕಾಂಗ್ರೆಸ್, ಜೆಡಿಎಸ್ ಆಗಿ ಬಿಟ್ಟಿದ್ದಾರೆ ಎಂದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಹೆಚ್.ಡಿ ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರವನ್ನು ಹೊಗಳುತ್ತಿದ್ದಾರೆ. ಆದರೆ, ಯತ್ನಾಳ್ ಅವರು ಮಾತ್ರ ಇಬ್ಬರು ಮೂವರಾಗಿ ವಿರೋಧ ಪಕ್ಷವಾಗಿ ಆ್ಯಕ್ಟಿಂಗ್ ಮಾಡುತ್ತಿದ್ದಾರೆ. ಅವರಿಗೆ ಏನಾದರೂ ಸಮಸ್ಯೆ ಇದ್ದರೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಲಿ. ಮಾಧ್ಯಮಕ್ಕೆ ಹೇಳಿಕೆ ಕೊಟ್ಟ ಮಾತ್ರಕ್ಕೆ ಲೀಡರ್ ಆಗುವುದಿಲ್ಲ ಎಂದರು.