ಗಂಗಾವತಿ: ಜಯನಗರದಲ್ಲಿರುವ ಪರಿಶಿಷ್ಟ ಪಂಗಡದ ಮೆಟ್ರಿಕ್ ಬಳಿಕದ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಶಾಸಕ ಪರಣ್ಣ ಮುನವಳ್ಳಿ ಇಂದು ದಿಢೀರ್ ಭೇಟಿ ನೀಡಿ ಅಗತ್ಯ ಸೌಲಭ್ಯಗಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ವಸತಿ ನಿಲಯದಲ್ಲಿನ ನಾನಾ ಸಮಸ್ಯೆಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು. ಮುಖ್ಯವಾಗಿ ಗುಣಮಟ್ಟದ ಆಹಾರದ ಸಮಸ್ಯೆ, ಕುಡಿಯುವ ಮತ್ತು ಬಳಕೆ ನೀರಿನ ಬಗ್ಗೆ ದೂರು ಸಲ್ಲಿಸಿದರು. ಗ್ರಂಥಾಲಯ, ಬಕೆಟ್, ಸ್ನಾನದ ಕೋಣೆ, ಹಾಸಿಗೆ, ಹೊದಿಕೆ ಮೊದಲಾದವುಗಳ ಕುರಿತು ವಿದ್ಯಾರ್ಥಿನಿಯರು ಶಾಸಕರ ಗಮನಕ್ಕೆ ತಂದರು.