ಕರ್ನಾಟಕ

karnataka

ETV Bharat / state

ಪ್ರೇಮ ವಿವಾಹವಾದ ಮಗಳನ್ನು ಬಲವಂತವಾಗಿ ಕರೆದೊಯ್ಯಲು ಪೋಷಕರ ವಿಫಲ ಯತ್ನ: ಆರೋಪ - parents

ಜಾತಿಯನ್ನೆ ಕಾರಣವಾಗಿಟ್ಟುಕೊಂಡು ಪ್ರೇಮ ವಿವಾಹವಾಗಿರುವ ಯುವತಿಯನ್ನು, ಪೋಷಕರು ಬಲವಂತವಾಗಿ ಕರೆದುಕೊಂಡು ಹೋಗಲು ಬಂದಿರುವ ಘಟನೆ ಗಂಗಾವತಿಯಲ್ಲಿ ಕಂಡುಬಂದಿದೆ.

ಗಂಗಾವತಿ ತಾಲೂಕಿನ ಪ್ರಗತಿ ನಗರದ ದಂಪತಿಗಳಿಗೆ ಪೋಷಕರಿಂದ ಅಡ್ಡಿ

By

Published : Mar 17, 2019, 4:53 PM IST

ಕೊಪ್ಪಳ:ಪ್ರೇಮ ವಿವಾಹವಾಗಿರುವ ಮಗಳನ್ನು ಆಕೆಯ ಮನೆಯವರು ಬಲವಂತವಾಗಿ ಕರೆದುಕೊಂಡು ಹೋಗಲು ಯತ್ನಿಸಿದ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಪ್ರಗತಿ ನಗರದಲ್ಲಿ ನಡೆದಿದೆ.

ಗಂಗಾವತಿ ತಾಲೂಕಿನ ಪ್ರಗತಿ ನಗರದ ರಮೇಶ ಈ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರೇಮಾಂಕರವಾಗಿ ಕಳೆದ 8 ತಿಂಗಳ ಹಿಂದೆ ಮದುವೆಯಾಗಿದ್ದರು. ಈ ಮದುವೆಗೆ ಯುವತಿಯ ಮನೆಯವರು ಒಪ್ಪಿಗೆ ನೀಡಿರಲ್ಲ. ಹೀಗಾಗಿ, ಯುವತಿಯನ್ನು ಕರೆದೊಯ್ಯಲು ಹುಡುಗಿಯ ಮನೆಯವರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ ಎಂದು ರಮೇಶ ಆರೋಪಿಸಿದ್ದಾನೆ.

ಗಂಗಾವತಿ ತಾಲೂಕಿನ ಪ್ರಗತಿ ನಗರದ ದಂಪತಿಗಳಿಗೆ ಪೋಷಕರಿಂದ ಅಡ್ಡಿ

ಇಂದು ಮಧ್ಯಾಹ್ನದ ವೇಳೆಗೆ ಯುವತಿ ತಂದೆ ಹಾಗೂ ಇನ್ನಿತರ ಎಂಟರಿಂದ 10 ಜನರ ಗುಂಪು ಎರಡು ಕಾರ್​ನಲ್ಲಿ ಪ್ರಗತಿ ನಗರಕ್ಕೆ ಬಂದಿದ್ದಾರೆ. ಯುವತಿಯನ್ನು ಬಲವಂತವಾಗಿ ಕರೆದೊಯ್ಯಲು ಪ್ರಯತ್ನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರ ನೆರವಿನೊಂದಿಗೆ ಪಾರಾಗಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಪ್ರೇಮ ವಿವಾಹವಾಗಿರುವ ಜೋಡಿಯು ರಕ್ಷಣೆ ಕೋರಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ದೌಡಾಯಿಸಿದ್ದಾರೆ.

ABOUT THE AUTHOR

...view details