ಕರ್ನಾಟಕ

karnataka

ETV Bharat / state

ಗೋಮಾಂಸ ರಫ್ತಿನಲ್ಲಿ ಬಿಜೆಪಿಯವರೇ ಮುಂದು: ರಾಘವೇಂದ್ರ ಹಿಟ್ನಾಳ್

ಕೊರೊನಾ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸುಮಾರು ₹5 ಸಾವಿರ ಕೋಟಿ ಖರ್ಚು ಮಾಡಿದೆ. ಕೊರೊನಾ ನೆಪದಲ್ಲಿ ಸರ್ಕಾರ ಅಭಿವೃದ್ಧಿಗೆ ಗಮನ ನೀಡುತ್ತಿಲ್ಲ. ಹೀಗಾಗಿ, ಅಭಿವೃದ್ಧಿ ವಿಷಯದಲ್ಲಿ ಈ ಪ್ರದೇಶ ಮತ್ತೆ ಒಂದು ವರ್ಷ ಹಿಂದಕ್ಕೆ ಹೋಗಿದಂತಾಗಿದೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಬೇಸರ ವ್ಯಕ್ತಪಡಿಸಿದರು.

Indias beef exports rise in bjp state Government
ಶಾಸಕ ಕೆ.ರಾಘವೇಂದ್ರ ಹಿಟ್ನಾಳ್

By

Published : Jan 16, 2021, 3:19 PM IST

ಕೊಪ್ಪಳ: ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಗೋಮಾಂಸ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡುತ್ತಿರುವವರು ಬಿಜೆಪಿ ಪಕ್ಷದವರೇ. ಹೀಗಾಗಿ, ಅವರನ್ನು ಮೊದಲು ಜೈಲಿಗೆ ಹಾಕಲಿ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಒತ್ತಾಯಿಸಿದ್ದಾರೆ.

ನಗರದಲ್ಲಿ ಗೋಮಾಂಸ ತಿಂದರೆ ಮಾಜಿ ಸಿಎಂ ಸಿದ್ಧರಾಮಯ್ಯ ಜೈಲಿಗೆ ಹಾಕುತ್ತೇವೆ ಎಂಬ ಸಚಿವ ಪ್ರಭು ಚೌಹಾಣ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಆಹಾರದ ಕುರಿತು ಸಿದ್ದರಾಮಯ್ಯ ಅವರು ಈಗಾಗಲೇ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ. ಗೋಮಾಂಸ ಅಧಿಕವಾಗಿ ರಫ್ತು ಮಾಡುವವರು ಬಿಜೆಪಿಯವರೇ. ಮೊದಲು ಅವರನ್ನು ಜೈಲಿಗೆ ತಳ್ಳಿ ಎಂದರು.

ಇದನ್ನೂ ಓದಿ...ಗಂಗಾವತಿ ತಹಶೀಲ್ದಾರ್ ಹುದ್ದೆಗೆ ಐಎಎಸ್ ಅಧಿಕಾರಿ ನೇಮಕ

ಇನ್ನು ಬಿಜೆಪಿಯಲ್ಲಿಯೇ ಕೆಸರೆರೆಚಾಟ ಶುರುವಾಗಿದೆ. ಈ ಸರ್ಕಾರ ಹೆಚ್ಚು ದಿನ ಇರಲ್ಲ ಎಂದು ಅವರ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ. ಅದೇನೋ ಸಿಡಿ ಇದೆ ಎಂಬ ವಿಚಾರದ ಬಗ್ಗೆ ಅವರದೇ ಪಕ್ಷದ ಶಾಸಕರು ಬಹಿರಂಗಪಡಿಸಿದ್ದಾರೆ. ಹೀಗಾಗಿ, ನಮಗೂ ಸಹ ಸಂಶಯವಾಗುತ್ತಿದೆ. ಮೊದಲು ತನಿಖೆಯಾಗಲಿ. ಆ ಮೂಲಕವಾದರೂ ಸತ್ಯ ಹೊರಗೆ ಬರಲಿ ಎಂದು ಹೇಳಿದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ್

ಸಿಡಿ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಏಕೆ ಇಷ್ಟೊಂದು ವೀಕ್ ಆಗಿದ್ದಾರೋ ಗೊತ್ತಿಲ್ಲ. ರಾಜ್ಯ ಸರ್ಕಾರ ಟೇಕಾಫ್ ಆಗುತ್ತಿಲ್ಲ. ಅನುದಾನ ನೀಡಿಕೆ ತಾರತಮ್ಯ ನಮಗಷ್ಟೆ ಅಲ್ಲ. ಅವರ ಪಕ್ಷದ ಶಾಸಕರಿಗೂ ಮಾಡುತ್ತಿದ್ದಾರೆ ಎಂಬುದನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಬರಬೇಕಾದ ಅನುದಾನ ಬಂದಿಲ್ಲ ಎಂದು ಕಿಡಿಕಾರಿದರು.

ABOUT THE AUTHOR

...view details