ಗಂಗಾವತಿ(ಕೊಪ್ಪಳ):ಇಂದಿನಿಂದ ಐದು ದಿನಗಳ ಕಾಲ ಕೊಪ್ಪಳ, ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಕೃಷಿ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಹವಾಮಾನ ವಿಭಾಗದ ವಿಜ್ಞಾನಿಗಳು ಮುನ್ಸೂಚನೆ ನೀಡಿದ್ದಾರೆ.
ಇಂದಿನಿಂದ ಐದು ದಿನಗಳ ಕಾಲ ಕೊಪ್ಪಳದಲ್ಲಿ ಭಾರಿ ಮಳೆ ಸಾಧ್ಯತೆ
ಯಲಬುರ್ಗಾ ತಾಲೂಕಿನಲ್ಲಿಂದು ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೊಪ್ಪಳದಲ್ಲಿ ಭಾರಿ ಮಳೆ ಸಾಧ್ಯತೆ
ಈ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿರುವ ಹವಾಮಾನ ತಜ್ಞ ಫಕೀರಪ್ಪ, ಜೂನ್ 16ರ ಸಂಜೆಯೊಳಗೆ ಯಲಬುರ್ಗಾ ತಾಲೂಕಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಹೊಲಕ್ಕೆ ತೆರಳುವ ರೈತರು ಮುಂಜಾಗ್ರತೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
- ಜೂ.16ರಂದು ಗಂಗಾವತಿಯಲ್ಲಿ 8.9 ಮಿ.ಮೀ, ಕೊಪ್ಪಳ 20.2 ಮಿ.ಮೀ, ಕುಷ್ಟಗಿ 36.8 ಮಿ.ಮೀ ಹಾಗೂ ಯಲಬುರ್ಗಾದಲ್ಲಿ 43.3 ಮಿ.ಮೀಟರ್ನಷ್ಟು ಮಳೆಯಾಗಲಿದೆ.
- ಜೂ.17ರಂದು ಗಂಗಾವತಿಯಲ್ಲಿ 10.2 ಮಿ.ಮೀ, ಕೊಪ್ಪಳ 12.8 ಮಿ.ಮೀ, ಕುಷ್ಟಗಿ 13.9 ಮಿ.ಮೀ ಹಾಗೂ ಯಲಬುರ್ಗಾದಲ್ಲಿ 14.5 ಮಿ.ಮೀಟರ್ನಷ್ಟು ಮಳೆಯಾಗಲಿದೆ.
- ಜೂ.18ರಂದು ಗಂಗಾವತಿಯಲ್ಲಿ 13.9 ಮಿ.ಮೀ, ಕೊಪ್ಪಳ 15.5 ಮಿ.ಮೀ, ಕುಷ್ಟಗಿ 16.8 ಮಿ.ಮೀ ಹಾಗೂ ಯಲಬುರ್ಗಾದಲ್ಲಿ 17.2 ಮಿ.ಮೀಟರ್ನಷ್ಟು ಮಳೆಯಾಗಲಿದೆ.
- ಜೂ.19ರಂದು ಗಂಗಾವತಿಯಲ್ಲಿ 10.3 ಮಿ.ಮೀ, ಕೊಪ್ಪಳ 10.9 ಮಿ.ಮೀ, ಕುಷ್ಟಗಿ 11.7 ಮಿ.ಮೀ ಹಾಗೂ ಯಲಬುರ್ಗಾದಲ್ಲಿ 11.6 ಮಿ.ಮೀಟರ್ನಷ್ಟು ಮಳೆಯಾಗಲಿದೆ.
- ಜೂ.20 ರಂದು ಗಂಗಾವತಿಯಲ್ಲಿ 6.0 ಮಿ.ಮೀ, ಕೊಪ್ಪಳ 7.0 ಮಿ.ಮೀ, ಕುಷ್ಟಗಿ 6.0 ಮಿ.ಮೀ ಹಾಗೂ ಯಲಬುರ್ಗಾದಲ್ಲಿ 7.0 ಮಿ.ಮೀಟರ್ನಷ್ಟು ಮಳೆಯಾಗಲಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಇನ್ನೂ ಒಂದು ವಾರ ಭಾರಿ ಮಳೆ : ಎಲ್ಲಡೆ ಹೈ ಅಲರ್ಟ್