ಕೊಪ್ಪಳ: ದೇಹಾರೋಗ್ಯವೇ ನಿಜವಾದ ಸಂಪತ್ತು. ಹೀಗಾಗಿ ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಆರೋಗ್ಯವೇ ಭಾಗ್ಯ , ಹಣ- ಆಸ್ತಿಯಲ್ಲ: ಗವಿಸಿದ್ದೇಶ್ವರ ಸ್ವಾಮೀಜಿ
ಜನರಿಗೆ ಈಗ ಕೇವಲ ಹಣ, ಆಸ್ತಿ ಗಳಿಸಬೇಕು ಎಂಬುದೇ ಮನಸ್ಸಿನಲ್ಲಿ ತುಂಬಿಕೊಂಡಿದೆ. ಇವುಗಳನ್ನು ಗಳಿಸುವ ಭರದಲ್ಲಿ ನಮ್ಮ ಆರೋಗ್ಯ ಕಳೆದುಕೊಳ್ಳುತ್ತಿದ್ದೇವೆ. ಹೀಗಾಗಿ ನಿಜವಾದ ಸಂಪತ್ತು ಅಂದರೆ ಅದು ಆರೋಗ್ಯ ಎಂದು ಗವಿಸಿದ್ದೇಶ್ವರ ಸ್ವಾಮೀಜಿ ಕಿವಿಮಾತು ಹೇಳಿದ್ದಾರೆ.
ನಗರದ ಗಾಂಧಿ ಸ್ಮಾರಕ ಸರ್ಕಾರಿ ಶಾಲೆ ಬಳಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಜನರಿಗೆ ಕೇವಲ ಹಣ, ಆಸ್ತಿ ಗಳಿಸಬೇಕೆಂಬುದೇ ಮನಸ್ಸಿನಲ್ಲಿ ತುಂಬಿಕೊಂಡಿದೆ. ಇವುಗಳನ್ನು ಗಳಿಸುವ ಭರದಲ್ಲಿ ನಮ್ಮ ಆರೋಗ್ಯ ಕಳೆದುಕೊಳ್ಳುತ್ತಿದ್ದೇವೆ. ಆರೋಗ್ಯ ಹಾಳು ಮಾಡಿಕೊಂಡು ಗಳಿಸಿದ ಹಣ ನೀಡಿ ಔಷಧಿ ತೆಗೆದುಕೊಳ್ಳುತ್ತಾರೆ ಎಂದರು.
ಆರೋಗ್ಯ ಚೆನ್ನಾಗಿದ್ದರೆ ಗಳಿಸಿದ ಆಸ್ತಿ, ಹಣವನ್ನು ಅನುಭವಿಸಬಹುದು. ಆದರೆ ಆರೋಗ್ಯವೇ ಸರಿ ಇಲ್ಲದಾಗ ಗಳಿಸಿದ ಹಣದಿಂದ ಏನು ಪ್ರಯೋಜನವಾಗದು. ಆರೋಗ್ಯವನ್ನು ಕಾಪಾಡಿಕೊಂಡು ಉತ್ತಮ ಆಹಾರ ಸೇವಿಸಬೇಕು. ಎಲ್ಲರೊಂದಿಗೆ ಒಳ್ಳೆಯ ರೀತಿಯಲ್ಲಿ ಬದುಕಬೇಕು. ದುಶ್ಚಟಗಳಿಂದ ದೂರವಿರಬೇಕು. ನಮ್ಮ ಸಂತೋಷದ ಜೊತೆಗೆ ಎಲ್ಲ ಜನರ ಸಂತೋಷವನ್ನು ಬಯಸಬೇಕು ಎಂದು ಶ್ರೀಗಳು ಕಿವಿಮಾತು ಹೇಳಿದರು.