ಕರ್ನಾಟಕ

karnataka

ETV Bharat / state

ನಕಲಿ ದಾಖಲೆ ಸೃಷ್ಟಿಸಿ ಭೂಮಿ ಒತ್ತುವರಿ.. ಸ್ಮಶಾನದಲ್ಲಿ ಮಲಗಿ ಪ್ರತಿಭಟನೆ.. - cemetery land encroachment

ಮಂಗಳವಾರ ಬೆಳಗ್ಗೆ ಕಟ್ಟಡ ನಿರ್ಮಾಣಕ್ಕೆಂದು ಬುನಾದಿ ತೆಗೆಯಲು ಕೂಲಿಕಾರರು ಹೋದಾಗ ಸ್ಥಳಕ್ಕೆ ಆಗಮಿಸಿದ ಚನ್ನದಾಸರ ಸಮುದಾಯದ ಕೆಲವರು ಸ್ಥಳಕ್ಕೆ ಆಗಮಿಸಿ ರುದ್ರಭೂಮಿಯಲ್ಲಿ ಮಲಗಿ ಪ್ರತಿಭಟನೆ ಮಾಡುವ ಮೂಲಕ ಕಟ್ಟಡ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರು..

gangavati channadasa community people outrage for land encroachment
ಗಂಗಾವತಿ ಸ್ಮಶಾನದಲ್ಲಿ ಮಲಗಿ ಪ್ರತಿಭಟನೆ

By

Published : Dec 28, 2021, 11:51 AM IST

ಗಂಗಾವತಿ(ಕೊಪ್ಪಳ) : ವ್ಯಕ್ತಿಯೋರ್ವರು ನಕಲಿ ದಾಖಲೆ ಸೃಷ್ಟಿಸಿ ಸ್ಮಶಾನ ಭೂಮಿ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಕೆಲವರು ಸ್ಮಶಾನದಲ್ಲಿ ಮಲಗಿ ಪ್ರತಿಭಟನೆ ನಡೆಸಿದ ಘಟನೆ ನಗರದ ಹಿರೇಜಂತಕಲ್​​ನಲ್ಲಿನ ವಿರುಪಾಪುರ ಸೀಮೆಯಲ್ಲಿ ನಡೆದಿದೆ.

ಸ್ಮಶಾನದಲ್ಲಿ ಮಲಗಿ ಪ್ರತಿಭಟನೆ..

ಹಿರೇಜಂತಕಲ್ ಪ್ರದೇಶದಲ್ಲಿ ಚನ್ನದಾಸರ ಸಮುದಾಯದ ರುದ್ರಭೂಮಿ ಇದೆ. ಇದೀಗ ನಕಲಿ ದಾಖಲೆಗಳ ಮೂಲಕ ಇದನ್ನ ಒತ್ತುವರಿ ಮಾಡಲಾಗಿದೆ. ನಗರಸಭೆಯ ಮಾಜಿ ಸದಸ್ಯ ರಮೇಶ ರಾಜಾರಾಂ ಎಂಬುವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಯಾಗಿದೆ ಎಂದು ಸ್ಥಳೀಯರಾದ ವೆಂಕಟೇಶ್‌ ಚನ್ನದಾಸರ ಆರೋಪಿಸಿದ್ದಾರೆ.

ಇದನ್ನೂ ಓದಿ:ಚೇಳು ಕಚ್ಚಿ ಚಿಕಿತ್ಸೆ ಪಡೆಯದೆ ನಿರ್ಲಕ್ಷ್ಯ ವಹಿಸಿದ ಯುವಕ ಸಾವು

ಮಂಗಳವಾರ ಬೆಳಗ್ಗೆ ಕಟ್ಟಡ ನಿರ್ಮಾಣಕ್ಕೆಂದು ಬುನಾದಿ ತೆಗೆಯಲು ಕೂಲಿಕಾರರು ಹೋದಾಗ ಸ್ಥಳಕ್ಕೆ ಆಗಮಿಸಿದ ಚನ್ನದಾಸರ ಸಮುದಾಯದ ಕೆಲವರು ಸ್ಥಳಕ್ಕೆ ಆಗಮಿಸಿ ರುದ್ರಭೂಮಿಯಲ್ಲಿ ಮಲಗಿ ಪ್ರತಿಭಟನೆ ಮಾಡುವ ಮೂಲಕ ಕಟ್ಟಡ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರು.

ABOUT THE AUTHOR

...view details