ಕರ್ನಾಟಕ

karnataka

ETV Bharat / state

ಮರಳು ದಂಧೆಕೋರರಿಂದ ಹಣ ಪಡೆದ ಆರೋಪ:ತಹಶೀಲ್ದಾರ್​​​ಗೆ ಕಡ್ಡಾಯ ರಜೆ...?

ಪ್ರಕರಣ ನಡೆದು ಒಂದು ತಿಂಗಳಾಗುತ್ತಾ ಬಂದರೂ ಸರ್ಕಾರದಿಂದ ಸಕಾಲಕ್ಕೆ ಪ್ರತಿಕ್ರಿಯೆ ದೊರೆಯದ ಹಿನ್ನೆಲೆ, ಸಾರ್ವಜನಿಕರು ಜಿಲ್ಲಾಡಳಿತದ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳಬಾರದು ಎಂಬ ಉದ್ದೇಶಕ್ಕೆ ಇದೀಗ ತರಬೇತಿ ಐಎಸ್ಎಸ್ ಶ್ರೇಣಿಯ ಅಧಿಕಾರಿಯನ್ನು ನಿಯೋಜಿಸಿದ್ದು, ಜ.18 ರಿಂದ ಹಾಲಿ ತಹಶೀಲ್ದಾರ್ ಕಡ್ಡಾಯ ರಜೆ ಮೇಲೆ ತೆರಳಲಿದ್ದಾರೆ ಎನ್ನಲಾಗಿದೆ.

Gangavathi Tehsildar accused of bribery
ಮರಳು ದಂಧೆಕೋರರಿಂದ ಹಣ ಪಡೆದು ಆರೋಪ

By

Published : Jan 18, 2021, 8:54 AM IST

Updated : Jan 18, 2021, 10:10 AM IST

ಗಂಗಾವತಿ: ಮರಳು ದಂಧೆಕೋರರಿಂದ ಹಣ ಪಡೆದಿದ್ದಾರೆ ಎಂಬ ಆರೋಪದಿಂದ ವಿವಾದಕ್ಕೀಡಾದ ಇಲ್ಲಿನ ತಹಶೀಲ್ದಾರ್ ಅವರನ್ನು ಕಡ್ಡಾಯ ರಜೆ ಮೇಲೆ ತೆರಳುವಂತೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ವೈರಲ್ ವಿಡಿಯೋ

ಮರಳು ದಂಧೆಕೋರರಿಂದ ಹಣಕ್ಕೆ ಬೇಡಿಕೆ ಇಟ್ಟು ಬಳಿಕ ಹಣ ಪಡೆದುಕೊಳ್ಳುತ್ತಿದ್ದ ತಹಶೀಲ್ದಾರ್ ವಿಡಿಯೋ ವೈರಲ್ ಆದ ಹಿನ್ನೆಲೆ, ಶಿಸ್ತುಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಪ್ರಕರಣ ನಡೆದು ಒಂದು ತಿಂಗಳಾಗುತ್ತಾ ಬಂದರೂ ಸರ್ಕಾರದಿಂದ ಸಕಾಲಕ್ಕೆ ಪ್ರತಿಕ್ರಿಯೆ ದೊರೆಯದ ಹಿನ್ನೆಲೆ, ಸಾರ್ವಜನಿಕರು ಜಿಲ್ಲಾಡಳಿತ ವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಳ್ಳಬಾರದು ಎಂಬ ಉದ್ದೇಶಕ್ಕೆ ಇದೀಗ ತರಬೇತಿ ಐಎಸ್ಎಸ್ ಶ್ರೇಣಿಯ ಅಧಿಕಾರಿಯನ್ನು ನಿಯೋಜಿಸಿದ್ದು, ಜ.18 ರಿಂದ ಹಾಲಿ ತಹಶೀಲ್ದಾರ್ ಕಡ್ಡಾಯ ರಜೆ ಮೇಲೆ ತೆರಳಲಿದ್ದಾರೆ ಎನ್ನಲಾಗಿದೆ.

ಓದಿ : ರಾಜ್ಯದಲ್ಲಿ ಇಂದಿನಿಂದ ಗೋಹತ್ಯೆ ನಿಷೇಧ ಕಾಯ್ದೆ ಜಾರಿ

Last Updated : Jan 18, 2021, 10:10 AM IST

ABOUT THE AUTHOR

...view details