ಗಂಗಾವತಿ :ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚುವ ಉದ್ದೇಶಕ್ಕೆ ಜಿಲ್ಲಾಡಳಿತ ನಗರದಲ್ಲಿ ನಡೆಸುತ್ತಿರುವ ಆಂಟಿಜೆನ್ ರ್ಯಾಪಿಡ್ ಟೆಸ್ಟ್ನಲ್ಲಿ ಸ್ಫೋಟಕ ಅಂಶಗಳು ಬೆಳಕಿಗೆ ಬರುತ್ತಿದ್ದು, ಇದೀಗ ಇಡೀ ನಗರವೇ ಬೆಚ್ಚಿ ಬೀಳುವ ಸಂಗತಿ ಹೊರಕ್ಕೆ ಬಂದಿದೆ.
ಆಂಟಿಜೆನ್ ರ್ಯಾಪಿಡ್ ಟೆಸ್ಟ್ ಫಲಿತಾಂಶ.. ಗಂಗಾವತಿಯಲ್ಲಿ ಮೂರೇ ದಿನದಲ್ಲಿ 150 ಪಾಸಿಟಿವ್
ಸೋಮವಾರ 62 ಹಾಗೂ ಭಾನುವಾರ 51 ಹೊಸ ಪ್ರಕರಣ ನಗರದಲ್ಲಿ ಪತ್ತೆಯಾಗಿವೆ. ಈ ಮೂಲಕ ಕೇವಲ ನಗರದಲ್ಲಿನ ಸೋಂಕಿತರ ಸಂಖ್ಯೆ 300 ಗಡಿ ದಾಟಿರುವುದು ಆತಂಕಕ್ಕೆ ಕಾರಣವಾಗಿದೆ..
ಭಾನುವಾರದಿಂದ ಆರಂಭವಾದ ರ್ಯಾಪಿಡ್ ಟೆಸ್ಟ್ನಲ್ಲಿ ಈವರೆಗೂ ಐದು ಸಾವಿರ ಜನರನ್ನು ಪರೀಕ್ಷೆ ಮಾಡಲಾಗಿದೆ. ಈ ಪೈಕಿ ನಗರದಲ್ಲಿ 150ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ಮಂಗಳವಾರ ಒಂದೇ ದಿನ 39 ಕೇಸು ಪತ್ತೆಯಾಗಿವೆ. ಸೋಮವಾರ 62 ಹಾಗೂ ಭಾನುವಾರ 51 ಹೊಸ ಪ್ರಕರಣ ನಗರದಲ್ಲಿ ಪತ್ತೆಯಾಗಿವೆ. ಈ ಮೂಲಕ ಕೇವಲ ನಗರದಲ್ಲಿನ ಸೋಂಕಿತರ ಸಂಖ್ಯೆ 300 ಗಡಿ ದಾಟಿರುವುದು ಆತಂಕಕ್ಕೆ ಕಾರಣವಾಗಿದೆ.
ರಾಯರ ಓಣಿ ಒಂದರಲ್ಲಿಯೇ ಎಂಟು ಜನರಿಗೆ ಮಂಗಳವಾರ ಪಾಸಿಟಿವ್ ಫಲಿತಾಂಶ ಬಂದಿದೆ. ಸ್ವಯಂ ಪ್ರೇರಣೆಯಿಂದ ಪರೀಕ್ಷೆಗೆ ಒಳಪಟ್ಟ ಕುಟುಂಬಗಳಲ್ಲಿ ಮೂರರಿಂದ ನಾಲ್ಕು ಜನರಿಗೆ ಸೋಂಕು ಇರುವುದು ಆತಂಕ್ಕೆ ಕಾರಣವಾಗಿದೆ.