ಗಂಗಾವತಿ: ಕೊರೊನಾ ಸೋಂಕಿತರಲ್ಲಿ ಉಂಟಾಗುತ್ತಿರುವ ಮಾನಸಿಕ ಹಾಗೂ ದೈಹಿಕ ಸಮಸ್ಯೆ ನಿವಾರಿಸುವ ಉದ್ದೇಶಕ್ಕೆ ತಾಲೂಕಿನ ಮಲ್ಲಾಪುರದಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿನ ಸೋಂಕಿತರಿಗೆ ವಿಭಿನ್ನ ಆಟಗಳನ್ನು ಆಡಿಸುವ ಮೂಲಕ ಗುಣಾತ್ಮಕ ಬದಲಾವಣೆಗೆ ಯತ್ನಿಸಲಾಗುತ್ತಿದೆ.
ನದಿ-ದಡ ಆಟ ಆಡಿದ ಸೋಂಕಿತರು... - ಸೋಂಕಿತರಿಗೆ ವಿಭಿನ್ನ ಆಟ
ಕೊರೊನಾ ಸೋಂಕಿತರಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ದಿಸಲು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿ ಸೋಂಕಿತರಿಗೆ ವಿಭಿನ್ನ ಆಟಗಳನ್ನು ಆಡಿಸಲಾಗುತ್ತಿದೆ.
ತಾಲೂಕಿನ ಆರೋಗ್ಯ ಇಲಾಖೆಯ ಸಿಬ್ಬಂದಿ ನೆರವಿನಿಂದ ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿ, ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ನದಿ ಮತ್ತು ದಡ, ದೈಹಿಕ ಕಸರತ್ತಿನ ಆಟಗಳನ್ನು ಆಡಿಸುತ್ತಿದ್ದಾರೆ. ಈ ಮೂಲಕ ಸೋಂಕಿತರಲ್ಲಿ ಮಾನಸಿಕವಾಗಿ ಸದೃಢರನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಾಲೂಕು ಪಂಚಾಯಿತಿ ಇಒ ಮೋಹನ್, ಮನೆಯಿಂದ ಹಾಗೂ ಕುಟುಂಬದಿಂದ ದೂರವಿರುವ ಸೋಂಕಿತರು ಮಾನಸಿಕವಾಗಿ ಕುಗ್ಗಿರುತ್ತಾರೆ. ಅವರಲ್ಲಿ ಮತ್ತೆ ಉತ್ಸಾಹ ಮೂಡಿಸುವ ಉದ್ದೇಶಕ್ಕೆ ದೈಹಿಕ, ಬೌದ್ಧಿಕ ಕಸರತ್ತಿನ ಆಟ ಆಡಿಸಲಾಗುತ್ತಿದೆ ಎಂದರು.