ಕರ್ನಾಟಕ

karnataka

ETV Bharat / state

ಗಂಗಾವತಿ: ಕೊರೊನಾ ತಡೆಗೆ ಉಚಿತ ಮಾಸ್ಕ್, ಔಷಧಿ ವಿತರಣೆ

ಜಿಲ್ಲೆಯಲ್ಲಿ ಕೊರೊನಾ ವ್ಯಾಪಕವಾಗಿ ಹೆಚ್ಚಾಗುತ್ತಿದ್ದು, ನಗರಸಭೆ ಸದಸ್ಯ ಮನಿಯಾರ ಜಿಲ್ಲಾಡಳಿತದ ನೇತೃತ್ವದ ಕೊರೊನಾ ಮುಕ್ತ ಕೊಪ್ಪಳ ಅಭಿಯಾನಕ್ಕೆ ಬೆಂಬಲಿಸಿದರು

Free Mask and Corona Drug to public in gangavati
ಕೊರೊನಾ ತಡೆಗೆ ಉಚಿತ ಮಾಸ್ಕ್, ಔಷಧಿ ವಿತರಣೆ

By

Published : Sep 8, 2020, 3:40 PM IST

ಗಂಗಾವತಿ: ಜಿಲ್ಲೆಯಲ್ಲಿ ಕೊರೊನಾ ವ್ಯಾಪಕ ಪ್ರಮಾಣದಲ್ಲಿ ಹರಡುತ್ತಿರುವ ಹಿನ್ನೆಲೆ ನಿಯಂತ್ರಣಕ್ಕೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸುವ ನಿಟ್ಟಿನಲ್ಲಿ ನಗರಸಭೆ ಸದಸ್ಯ ಶಾಮೀದ ಮನಿಯಾರ 22ನೇ ವಾರ್ಡ್​ನ ಜನರಿಗೆ ಉಚಿತ ಔಷಧಿ ಮತ್ತು ಮಾಸ್ಕ್ ವಿತರಿಸಿದರು.

ಕೊರೊನಾ ತಡೆಗೆ ಉಚಿತ ಮಾಸ್ಕ್, ಔಷಧಿ ವಿತರಣೆ

ಕೊರೊನಾ ಮುಕ್ತ ಕೊಪ್ಪಳ ಜಿಲ್ಲೆ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಇದಾಗಿತ್ತು. ಕೊಪ್ಪಳ ಗವಿಮಠದ ಶ್ರೀಗಳು ಮತ್ತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಉಚಿತವಾಗಿ ಮಾಸ್ಕ್, ಔಷಧಿ ವಿತರಿಸಲಾಯಿತು.

ವಾರ್ಡ್​ನ ಸುಮಾರು 800 ಜನರಿಗೆ ಉಚಿತವಾಗಿ ರೋಗ ನಿರೋಧ ಶಕ್ತಿ ಹೆಚ್ಚಿಸುವ ಮಾತ್ರೆಗಳನ್ನು ನೀಡಲಾಗಿದೆ. ಜನ ಇದರ ಸದುಪಯೋಗ ಪಡೆದುಕೊಳ್ಳಬೇಕು. ಈ ಮೂಲಕ ಕೊರೊನಾ ಮುಕ್ತವಾಗಿಸಲು ಸಹಕಾರ ನೀಡಬೇಕು ಎಂದು ಸದಸ್ಯ ಮನಿಯಾರ್ ಮನವಿ ಮಾಡಿದರು.

ABOUT THE AUTHOR

...view details