ಕರ್ನಾಟಕ

karnataka

ETV Bharat / state

ಅಂಜನಾದ್ರಿ ಬೆಟ್ಟದಲ್ಲಿನ ಕೋತಿಗಳಿಗೆ ವಿಶೇಷ ಆಹಾರ ವ್ಯವಸ್ಥೆ!

ಕಳೆದ ಮೂರು ವಾರಗಳಲ್ಲಿ ಎರಡನೇ ಬಾರಿಗೆ ಅಂಜನಾದ್ರಿ ಬೆಟ್ಟದ ಆಡಳಿತ ಸಮಿತಿ ಹಾಗೂ ಕಂದಾಯ ಇಲಾಖೆಯಿಂದ ಕೋತಿಗಳಿಗೆ ಆಹಾರದ ವ್ಯವಸ್ಥೆ ಮಾಡಲಾಯಿತು.

Food provide to monkeys  by revenue Department in Gangavathi
ಕಂದಾಯ ಇಲಾಖೆಯಿಂದ ವಾನರ ಸೈನ್ಯಕ್ಕೆ ವಿಶೇಷ ಭೋಜನ

By

Published : Apr 14, 2020, 4:42 PM IST

ಗಂಗಾವತಿ:ಲಾಕ್​​​ಡೌನ್​​ ಪರಿಣಾಮದಿಂದ ಆಹಾರವಿಲ್ಲದೇ ಪರದಾಡುತ್ತಿರುವ ತಾಲೂಕಿನ ಅಂಜನಾದ್ರಿ ಬೆಟ್ಟದ ಕೋತಿಗಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರ್ ಎಲ್.ಡಿ.ಚಂದ್ರಕಾಂತ್ ನೇತೃತ್ವದಲ್ಲಿ ಆಹಾರದ ವ್ಯವಸ್ಥೆ ಮಾಡಲಾಯಿತು.

ಕಳೆದ ಮೂರು ವಾರಗಳಲ್ಲಿ ಎರಡನೇ ಬಾರಿಗೆ ಅಂಜನಾದ್ರಿ ಬೆಟ್ಟದ ಆಡಳಿತ ಸಮಿತಿ ಹಾಗೂ ಕಂದಾಯ ಇಲಾಖೆಯಿಂದ ಕೋತಿಗಳಿಗೆ ಆಹಾರದ ವ್ಯವಸ್ಥೆ ಮಾಡಲಾಗಿದ್ದು, ಈ ಸಂದರ್ಭದಲ್ಲಿ ಕೋತಿಗಳಿಗೆ ಪೌಷ್ಟಿಕ ಆಹಾರ ನೀಡಿದರು.

ಕಂದಾಯ ಇಲಾಖೆಯಿಂದ ವಾನರ ಸೈನ್ಯಕ್ಕೆ ವಿಶೇಷ ಭೋಜನ

ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಚಂದ್ರಕಾಂತ್, ಕೋತಿಗಳಿಗೆ ಶೀಘ್ರ ನಿರಂತವಾಗಿ ಆಹಾರದ ವ್ಯವಸ್ಥೆ ಮಾಡಲಾಗುವುದು. ಬಿಸಿಲಿನ ತಾಪಮಾನಕ್ಕೆ ತಾಳಿಕೊಳ್ಳುವಂತೆ ಅವುಗಳಿಗೆ ಶಕ್ತಿ ನೀಡಲು ಪೌಷ್ಟಿಕ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕೇವಲ ಕಡಲೆ ಕಾಳು ಮಾತ್ರವಲ್ಲ, ನಿತ್ಯವೂ ಹಣ್ಣು, ಚಪಾತಿ, ರೋಟಿಯಂತ ಇನ್ನಿತರ ಆಹಾರದ ವ್ಯವಸ್ಥೆ ಮಾಡಲಾಗುವುದು ಎಂದರು.

ABOUT THE AUTHOR

...view details