ಕೊಪ್ಪಳ: ಅಗ್ನಿ ಆಕಸ್ಮಿಕದಿಂದ ಹತ್ತು ಮೇವಿನ ಬಣವೆಗಳು ಹೊತ್ತಿ ಉರಿದಿರುವ ಘಟನೆ ಕುಷ್ಟಗಿ ತಾಲೂಕಿನ ಹೂಲಗೇರಿ ಗ್ರಾಮದಲ್ಲಿ ಇಂದು ಬೆಳಗಿನಜಾವ ನಡೆದಿದೆ.
ಅಗ್ನಿ ಆಕಸ್ಮಿಕ, ಹತ್ತು ಮೇವಿನ ಬಣವೆಗಳು ಸುಟ್ಟು ಭಸ್ಮ - ಅಗ್ನಿ ಆಕಸ್ಮಿಕ ಹೊತ್ತಿ ಉರಿದ ಹತ್ತು ಮೇವಿನ ಬಣವೆ
ಇಂದು ಬೆಳಗಿನಜಾವ ಅಗ್ನಿಯ ರೌದ್ರನರ್ತನಕ್ಕೆ ಒಂದೇ ಕಡೆಯಿದ್ದ ಸುಮಾರು 10 ಮೇವಿನ ಬಣವೆಗಳು ಸುಟ್ಟು ಭಸ್ಮವಾಗಿವೆ. ಕೊಪ್ಪಳ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಮೇವಿನ ಬಣವೆಗಳಿಗೆ ಬೆಂಕಿ
ಅಗ್ನಿಯ ರೌದ್ರನರ್ತನಕ್ಕೆ ಕ್ಷಣಾರ್ಧದಲ್ಲೇ ಹೊತ್ತಿಕೊಂಡ ಬೆಂಕಿಯಿಂದ ಒಂದೇ ಕಡೆಯಿದ್ದ ಸುಮಾರು 10 ಮೇವಿನ ಬಣವೆಗಳು ಸುಟ್ಟು ಭಸ್ಮವಾಗಿವೆ. ಹನುಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.