ಗಂಗಾವತಿ(ಕೊಪ್ಪಳ):ಅಂಜನಾದ್ರಿ ಅಭಿವೃದ್ಧಿಯ ವಿಚಾರವಾಗಿ ರಾಜ್ಯ ಸರ್ಕಾರ ಕೈಗೊಳ್ಳಲು ಉದ್ದೇಶಿಸಿರುವ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಾಗುವ ಭೂ ಸ್ವಾಧೀನಕ್ಕೆ ಅವಕಾಶ ನೀಡದಿರಲು ರೈತರು ಸಾಮೂಹಿಕವಾಗಿ ತೀರ್ಮಾನ ಕೈಗೊಂಡಿದ್ದಾರೆ.
ಈ ಬಗ್ಗೆ ಭಾನುವಾರ ಸಂಜೆ ತಾಲೂಕಿನ ಆನೆಗೊಂದಿಯ ರಂಗನಾಥ ದೇಗುಲದಲ್ಲಿ ನಡೆದ ರೈತರ ಸಭೆಯಲ್ಲಿ ಸರ್ಕಾರದ ಭೂಸ್ವಾಧೀನ ಕಾರ್ಯಕ್ಕೆ ತಮ್ಮ ಜಮೀನು ನೀಡದಿರಲು ರೈತರು ಮತ್ತು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಸಾಮೂಹಿಕವಾಗಿ ನಿರ್ಧಾರ ಕೈಗೊಂಡರು.
ಅಲ್ಲದೇ ನಾಳೆ ಇದೇ ದೇಗುಲದಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ನೇತೃತ್ವದಲ್ಲಿ ಭೂ ಸ್ವಾಧೀನ ಕಾರ್ಯಕ್ರಮದ ಭಾಗವಾಗಿ ನಡೆಯಲಿರುವ ಅಧಿಕಾರಿಗಳ ಸಭೆಯಲ್ಲಿ ರೈತರು ವಿರೋಧ ವ್ಯಕ್ತಪಡಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಹಿರಿಯ ರೈತ ಮುಖಂಡ ಸುದರ್ಶನ ಅವರು ಭೂಸ್ವಾಧೀನದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ರೈತರ ಗಮನ ಸೆಳೆದರು. ಸಭೆಯಲ್ಲಿ ಅರಸು ವಂಶದ ರಾಜ ಹರಿಹರದೇವರಾಯ ಸೇರಿದಂತೆ ಸುತ್ತಲಿನ ಗ್ರಾಮದ ರೈತರು ಪಾಲ್ಗೊಂಡಿದ್ದರು.
ಇದನ್ನೂ ಓದಿ:ಕಾರವಾರ: 16 ಲಕ್ಷ ಮೌಲ್ಯದ 75 ಕೆಜಿ ಮಾದಕ ದ್ರವ್ಯ ನಾಶಪಡಿಸಿದ ಪೊಲೀಸರು