ಕರ್ನಾಟಕ

karnataka

ETV Bharat / state

ಕಾಲುವೆಯ ಹೂಳು ತೆಗೆದ ಕೂಲಿಕಾರರಿಗೆ ಸಿಹಿಯೂಟ ಬಡಿಸಿದ ರೈತರು - koppal news

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮದ ರೈತರು, ಕಾಲುವೆಯಲ್ಲಿನ ಹೂಳು ತೆಗೆಯಲು ಶ್ರಮಿಸಿದ ಸುಮಾರು 400ಕ್ಕೂ ಹೆಚ್ಚು ಕೂಲಿಕಾರರಿಗೆ ಸಿಹಿ ಊಟ ಹಾಕಿದ್ದಾರೆ.

farmers arrange feast for labors
ಕಾಲುವೆಯಲ್ಲಿನ ಹೂಳು ತೆಗೆಯಲು ಶ್ರಮಿಸಿದ ಕೂಲಿಕಾರರಿಗೆ ಸಿಹಿಯೂಟ ಬಡಿಸಿದ ರೈತರು

By

Published : Jul 22, 2020, 5:33 PM IST

ಗಂಗಾವತಿ (ಕೊಪ್ಪಳ):ತಾಲ್ಲೂಕಿನ ಆನೆಗೊಂದಿ ಗ್ರಾಮದ ರೈತರು, ತಮ್ಮ ಸುಮಾರು 150 ಎಕರೆ ಜಮೀನಿಗೆ ನೀರಿನ ಮೂಲವಾದ ಕಾಲುವೆಯಲ್ಲಿನ ಹೂಳು ತೆಗೆಯಲು ಶ್ರಮಿಸಿದ ಸುಮಾರು 400ಕ್ಕೂ ಹೆಚ್ಚು ಕೂಲಿಕಾರರಿಗೆ ಸಿಹಿ ಊಟ ಹಾಕಿದ್ದಾರೆ.

ಕಾಲುವೆಯಲ್ಲಿನ ಹೂಳು ತೆಗೆಯಲು ಶ್ರಮಿಸಿದ ಕೂಲಿಕಾರರಿಗೆ ಸಿಹಿಯೂಟ ಬಡಿಸಿದ ರೈತರು

ಗ್ರಾಮದ ಊರಿನ ದೇವಸ್ಥಾನದಲ್ಲಿ ಕೂಲಿಕಾರರಿಗೆ ಸಿಹಿಊಟ ಹಾಕಲಾಯಿತು. ಈಗಾಗಲೇ ತುಂಗಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಬೀಳುತ್ತಿರುವ ಕಾರಣ ಶೀಘ್ರವೇ ಕಾಲುವೆಗಳಿಗೆ ನೀರು ಬಿಡುವ ಸಾಧ್ಯತೆಯಿದೆ. ಈ ಹಿನ್ನೆಲೆ, ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸಲಾಗಿರುವ ಕಾಲುವೆಗಳಲ್ಲಿ ಸಂಗ್ರಹವಾಗಿರುವ ಹೂಳನ್ನು ನರೇಗಾ ಯೋಜನೆಯಡಿಯಲ್ಲಿ ತೆಗೆಯಲಾಗುತ್ತಿದೆ.

ಹೀಗಾಗಿ, ಕಾಲುವೆಯಲ್ಲಿನ ಹೂಳು ತೆಗೆಯಲು ಶ್ರಮಿಸಿದ ಸುಮಾರು 400ಕ್ಕೂ ಹೆಚ್ಚು ಕೂಲಿಕಾರರಿಗೆ ಆನೆಗೊಂದಿ ಗ್ರಾಮದ ರೈತರು ಸಿಹಿ ಊಟ ಹಾಕಿದ್ದಾರೆ.

ABOUT THE AUTHOR

...view details