ಕರ್ನಾಟಕ

karnataka

ETV Bharat / state

ಈಟಿವಿ ಭಾರತ ವರದಿಗೆ ಎಚ್ಚೆತ್ತ ಪುರಸಭೆ... ತೆರೆದ ಬಾವಿ ಮುಚ್ಚಿಸಿ ಅಪಾಯ ತಪ್ಪಿಸಿದ ಅಧಿಕಾರಿಗಳು

ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ತೆರೆದ ಬಾವಿ ಮುಚ್ಚದ ಕುರಿತು ಈಟಿವಿ ಭಾರತ ಮಾಡಿದ್ದ ವರದಿಗೆ ಕುಷ್ಟಗಿ ಪುರಸಭೆ ಕೊನೆಗೂ ಎಚ್ಚೆತ್ತುಕೊಂಡು ಬಾವಿ ಮುಚ್ಚುತ್ತಿದೆ.

By

Published : Oct 6, 2019, 9:55 PM IST

etv-bharat-impact

ಕೊಪ್ಪಳ:ಜಿಲ್ಲೆಯ ಕುಷ್ಟಗಿ ಪುರಸಭೆ ಕೊನೆಗೂ ಎಚ್ಚೆತ್ತುಕೊಂಡಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ತೆರೆದ ಬಾವಿಯನ್ನು ಮುಚ್ಚಲು ಮುಂದಾಗಿದೆ.

ಪೊಲೀಸ್ ಕ್ವಾಟ್ರಸ್​​ನಲ್ಲಿರುವ ನಿರುಪಯುಕ್ತ ಬಾವಿಯ ಕುರಿತು 'ಈಟಿವಿ ಭಾರತ' ವಿಸ್ತೃತ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ತೆರೆದ ಬಾವಿ ಮುಚ್ಚಿದ ಪುರಸಭೆ ಅಧಿಕಾರಿಗಳು

ತೆರೆದ ಬಾವಿ ಚರಂಡಿ ನೀರು ತುಂಬಿಕೊಂಡು ಅಪಾಯಕ್ಕೆ ಆಹ್ವಾನ‌ ನೀಡುತ್ತಿತ್ತು. ಅದು ಜನವಸತಿ ಪ್ರದೇಶವಾಗಿದ್ದರಿಂದ ಮಕ್ಕಳು ಆಟವಾಡುವುದು ಸಾಮಾನ್ಯ. ಹೀಗಾಗಿ, ಗೊತ್ತಿಲ್ಲದೆ ಅಲ್ಲಿಗೆ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ. ಬಾವಿಯ ಬಳಿ ಹೋಗಲೂ ಭಯವಾಗುವ ಸನ್ನಿವೇಶವಿರುವುದು ಸ್ಥಳೀಯರ ಆತಂಕಕ್ಕೆ ಎಡೆಮಾಡಿಕೊಟ್ಟಿತ್ತು. ಈ ಕುರಿತಂತೆ ಈಟಿವಿ ಭಾರತ ವರದಿ ಪ್ರಕಟಿಸಿತ್ತು.

'ಈಟಿವಿ ಭಾರತ' ವರದಿ ನಾ ನಿಮ್ಗೇ ಮೊದ್ಲೇ ಹೇಳ್ತೀನಿ ಕೇಳ್ರೀ,, ಅಪ್ಪಿತಪ್ಪಿ ಇಲ್ಲಿಗೆ ಮಾತ್ರ ಬರಬ್ಯಾಡ್ರೀ..

ವರದಿಯಿಂದ ಎಚ್ಚೆತ್ತುಕೊಂಡ ಪುರಸಭೆ, ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ತೆರೆದ ಬಾವಿಗೆ ಮೊರಂ ಹಾಕಿ ಮುಚ್ಚುವ ಕಾರ್ಯ ಕೈಗೊಂಡಿದೆ. ಬಾವಿಯು ನೆಲಮಟ್ಟಕ್ಕಿದ್ದು, ಅದಕ್ಕೆ ಹೊಂದಿಕೊಂಡಿರುವ ತಡೆಗೋಡೆ ಕುಸಿಯುತ್ತಿತ್ತು. ಈಗ ಬಾವಿ ಮುಚ್ಚುತ್ತಿರುವುದು ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ABOUT THE AUTHOR

...view details