ಕುಷ್ಟಗಿ(ಕೊಪ್ಪಳ): ಉತ್ತರ ಭಾರತದ ವಲಸೆ ಕಾರ್ಮಿಕರನ್ನು ತಲುಪಿಸಿ ಬಂದ ಸಾರಿಗೆ ಸಿಬ್ಬಂದಿ ಕೈ ಬದಲಿಗೆ ಚೀಟಿ ಮೇಲೆ ಕ್ವಾರಂಟೈನ್ ಸೀಲ್ ಹಾಕಿ ಕಳುಹಿಸಲಾಗಿತ್ತು. ಈ ಸುದ್ದಿಯನ್ನು ಈಟಿವಿ ಭಾರತ ಸುದ್ದಿ ಪ್ರಕಟಿಸಿತ್ತು.
ಸಾರಿಗೆ ಸಿಬ್ಬಂದಿ ಕೈಗೆ ಕೊನೆಗೂ ಬಿತ್ತು ಕ್ವಾರಂಟೈನ್ ಸೀಲ್ ಮುದ್ರೆ! - ಕ್ವಾರಂಟೈನ್ ಸೀಲ್
ವಲಸೆ ಕಾರ್ಮಿಕರನ್ನು ಹೊರ ರಾಜ್ಯಕ್ಕೆ ಬಿಟ್ಟು ಬಂದಿದ್ದ ಸಾರಿಗೆ ನೌಕರರ ಕೈಗೆ ಈದೀಗ ಕ್ವಾರಂಟೈನ್ ಸೀಲ್ ಬಿದ್ದಿದೆ. ಇದಕ್ಕೂ ಮೊದಲು ಸಿಬ್ಬಂದಿಯ ಕೈ ಬದಲಿಗೆ ಚೀಟಿ ಮೇಲೆ ಕ್ವಾರಂಟೈನ್ ಸೀಲ್ ಹಾಕಿ ಕಳುಹಿಸಲಾಗಿತ್ತು. ಈ ಕುರಿತು ಈಟಿವಿ ಭಾರತ ವರದಿ ಮಾಡಿತ್ತು.
ಈಟಿವಿ ಭಾರತ್ ಇಂಪ್ಯಾಕ್ಟ್: ಸಾರಿಗೆ ಸಿಬ್ಬಂದಿ ಕೈಗೆ ಕೊನೆಗೂ ಬಿತ್ತು ಕ್ವಾರಂಟೈನ್ ಸೀಲ್..!
ಈ ಹಿನ್ನೆಲೆ ಇದೀಗ ಎಚ್ಚೆತ್ತ ತಹಶೀಲ್ದಾರ್ ಎಂ.ಸಿದ್ದೇಶ್, 8 ಜನ ಚಾಲಕರು, ನಾಲ್ವರು ಮೆಕ್ಯಾನಿಕ್ಗಳನ್ನು ಪುನಃ ಕರೆಯಿಸಿ ಕ್ವಾರಂಟೈನ್ ಸೀಲ್ ಹಾಕಿಸಿ 22 ದಿನಗಳವರೆಗೆ ಮನೆಯಲ್ಲಿರಬೇಕೆಂದು ಸೂಚನೆ ನೀಡಿದ್ದಾರೆ.