ಕರ್ನಾಟಕ

karnataka

ETV Bharat / state

ಭಾರಿ ಗಾಳಿಗೆ ನೆಲಕ್ಕೊರಗಿದ ವಿದ್ಯುತ್ ಕಂಬ: ವಿದ್ಯುತ್ ಪೂರೈಕೆ ಘಟಕಕ್ಕೆ ಹಾನಿ

ಭಾರಿ ಮಳೆ ಮತ್ತು ಗಾಳಿಯಿಂದಾಗಿ ನಗರದ ಹೊರ ಭಾಗದಲ್ಲಿನ ಕಂಪ್ಲಿ ರಸ್ತೆಯ ವಿದ್ಯುತ್ ಪೂರೈಕೆ ಘಟಕದಲ್ಲಿ ಹಾನಿಯಾಗಿದೆ. ಅಷ್ಟೇ ಅಲ್ಲದೆ, ಹೇರೂರು ಭಾಗಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ನಾಲ್ಕಕ್ಕೂ ಹೆಚ್ಚು ಕಂಬಗಳು ನೆಲಕ್ಕೊರಗಿವೆ.

Electric poll fell due to huge rain in Gangavathi
ಭಾರಿ ಗಾಳಿಗೆ ನೆಲಕ್ಕೊರಗಿದ ವಿದ್ಯುತ್ ಕಂಬ: ವಿದ್ಯುತ್ ಪೂರೈಕೆ ಘಟಕ ಹಾನಿ

By

Published : May 10, 2020, 3:34 PM IST

ಗಂಗಾವತಿ(ಕೊಪ್ಪಳ): ರಾತ್ರಿ ಸುರಿದ ಭಾರಿ ಮಳೆ ಮತ್ತು ಗಾಳಿಯಿಂದಾಗಿ ನಗರದ ಹೊರ ಭಾಗದಲ್ಲಿನ ಕಂಪ್ಲಿ ರಸ್ತೆಯ ವಿದ್ಯುತ್ ಪೂರೈಕೆ ಘಟಕದಲ್ಲಿ ಹಾನಿಯಾಗಿದೆ. ಸ್ಟೇಷನ್ ಹೊರಭಾಗದಲ್ಲಿನ ಶೆಡ್ ಹಾರಿ ಹೋಗಿದ್ದು, ವಿದ್ಯುತ್ ಪೂರೈಕೆಗೆ ಸಮಸ್ಯೆಯಾಗಿದೆ.

ಭಾರಿ ಗಾಳಿಗೆ ನೆಲಕ್ಕೊರಗಿದ ವಿದ್ಯುತ್ ಕಂಬ: ವಿದ್ಯುತ್ ಪೂರೈಕೆ ಘಟಕ ಹಾನಿ

ಹೇರೂರು ಭಾಗಕ್ಕೆ ವಿದ್ಯುತ್ ಸಂಕರ್ಪ ಕಲ್ಪಿಸುವ ಮಾರ್ಗದಲ್ಲಿ ನಾಲ್ಕಕ್ಕೂ ಹೆಚ್ಚು ಕಂಬಗಳು ನೆಲಕ್ಕೊರಗಿವೆ. ಬೆಳಗ್ಗೆ 6 ಗಂಟೆಯಿಂದಲೇ ಜೆಸ್ಕಾಂ ಸಿಬ್ಬಂದಿ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ. ಹೇರೂರು ಸೇರಿದಂತೆ ಸುತ್ತಲಿನ ಗ್ರಾಮಕ್ಕೆ ಸಂಜೆ 6 ಗಂಟೆಯೊಳಗೆ ವಿದ್ಯುತ್ ಪೂರೈಸುವುದಾಗಿ ಇಲಾಖೆಯ ಮೂಲಗಳು ತಿಳಿಸಿವೆ.

ಭಾರಿ ಗಾಳಿಗೆ ನೆಲಕ್ಕೊರಗಿದ ವಿದ್ಯುತ್ ಕಂಬ: ವಿದ್ಯುತ್ ಪೂರೈಕೆ ಘಟಕ ಹಾನಿ

ಈ ಅಪಘಾತದಿಂದ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದ್ದು, ಇಲಾಖೆ ಲೆಕ್ಕಾಚಾರದಲ್ಲಿ ತೊಡಗಿದೆ.

ABOUT THE AUTHOR

...view details