ಕರ್ನಾಟಕ

karnataka

ETV Bharat / state

ಸಕಾಲಕ್ಕೆ ಸಿಗದ ವೈದ್ಯರು: ರೋಗಿಗಳ ಸ್ಥಿತಿ ಕೇಳೋರಿಲ್ಲ - ಆಸ್ಪತ್ರ ಅವ್ಯವಸ್ಥೆ

ಗಂಗಾವತಿಯಲ್ಲಿ ವೈದ್ಯಕೀಯ ಸೇವೆಗೆ ಹೆಸರುವಾಸಿಯಾದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸಕಾಲಕ್ಕೆ ಸಿಗದೇ ರೋಗಿಗಳು ಪರದಾಡುವಂತಾಗಿದೆ.

ರೋಗಿಗಳ ಸ್ಥಿತಿ ಕೇಳೋರಿಲ್ಲ

By

Published : Sep 13, 2019, 7:28 PM IST

Updated : Sep 13, 2019, 9:34 PM IST

ಗಂಗಾವತಿ: ಅತ್ಯುತ್ತಮ ಗುಣಮಟ್ಟದ ಸೇವೆ, ವೈದ್ಯ ಸಿಬ್ಬಂದಿಯ ಕಾರ್ಯ ಕ್ಷಮತೆಯಿಂದ ಇಡೀ ರಾಜ್ಯದಲ್ಲಿ ಮನೆಮಾತಾಗಿರುವ ಕೊಪ್ಪಳದ ಗಂಗಾವತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ಸಕಾಲಕ್ಕೆ ವೈದ್ಯ ಸಿಬ್ಬಂದಿ ಸಿಗದೇ ರೋಗಿಗಳು ಪರದಾಡಿದ ಪ್ರಸಂಗ ನಡೆಯಿತು.

ರೋಗಿಗಳ ಸ್ಥಿತಿ ಕೇಳೋರಿಲ್ಲ

ಆಸ್ಪತ್ರೆಯ ಹೊರ ರೋಗಿಗಳಾಗಿ, ನಾನಾ ಬಗೆಯ ಚಿಕಿತ್ಸೆ ಪಡೆಯಲು ಬಯಸಿ ಬಂದಿದ್ದ ನಗರ ಮತ್ತು ಗ್ರಾಮೀಣ ಭಾಗದ ನೂರಾರು ರೋಗಿಗಳು ವೈದ್ಯರಿಗಾಗಿ ನಾಲ್ಕಾರು ಗಂಟೆಗಳ ಕಾಲ ಕಾಯ್ದು ವಾಪಾಸ್ಸಾಗುವ ಸ್ಥಿತಿಯಲ್ಲಿದ್ದರು.

ಆಸ್ಪತ್ರೆಯ ಆಡಳಿತಾಧಿಕಾರಿ ಈಶ್ವರ ಸವುಡಿ ಇಲಾಖೆಯ ಸಭೆಯ ನಿಮಿತ್ತ ಬೆಂಗಳೂರಿಗೆ ತೆರಳಿದ್ದರಿಂದ ಆಸ್ಪತ್ರೆಯಲ್ಲಿ ಇತರೆ ವೈದ್ಯರು ಸಮಯಕ್ಕೆ ಸರಿಯಾಗಿ ರೋಗಿಗಳಿಗೆ ದೊರೆತಿಲ್ಲ ಎಂದು ರೋಗಿಗಳು ದೂರಿದರು.

ದಂತ, ನೇತ್ರ, ಕೀವು, ಮೂಗು, ಗಂಟಲು, ಎಲುಬು-ಕೀಲು, ಸ್ತ್ರೀರೋಗ ಹೀಗೆ ಮತ್ತಿತರ ತಜ್ಞರ ಬಳಿ ಚಿಕಿತ್ಸೆಗೆ ಬಂದಿದ್ದ ರೋಗಿಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೂ ವೈದ್ಯರಿಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು.

ಕೆಲ ವೈದ್ಯರು ಬೆಳಗ್ಗೆ ಹತ್ತು ಗಂಟೆಗೆ ಬಂದು ಒಂದು ಗಂಟೆ ರೋಗಿಗಳನ್ನು ಪರೀಕ್ಷಿಸುತ್ತಾರೆ. ಬಳಿಕ ಹೊರ ಹೋದರೆ ಮತ್ತೆ ರೋಗಿಗಳ ಕೈಗೆ ಸಿಗುವುದಿಲ್ಲ. ವೈದ್ಯರ ಬಗ್ಗೆ ಮಾಹಿತಿ ನೀಡಲು ಕನಿಷ್ಟ ಪಕ್ಷ ಪರಿಚಾರಕರನ್ನಾದರೂ ನೇಮಿಸಬೇಕು ಎಂದು ರೋಗಿಗಳು ಕೋರಿದ್ದಾರೆ.

Last Updated : Sep 13, 2019, 9:34 PM IST

ABOUT THE AUTHOR

...view details