ಗಂಗಾವತಿ :ಕಾರಟಗಿ ಹಾಗೂ ತಾಲೂಕಿನ ನೀರಾವರಿ ಪ್ರದೇಶದಲ್ಲಿ ಬೆಳೆದಿರುವ ಭತ್ತ ಬೆಳೆ ಕಟಾವಿಗೆ ಬಂದಿದ್ದು, ಇದೀಗ ಭತ್ತಕ್ಕೆ ದುಂಡಾಣು ಮಚ್ಚೆ ರೋಗ ಕಾಣಿಸಿಕೊಂಡಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ಬಸವಪಟ್ಟಣ, ಸಿದ್ಧಿಕೇರಿ, ಹೇರೂರು ಸೇರಿದಂತೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿನ ಭತ್ತದ ಬೆಳೆಯಲ್ಲಿ ಈ ರೋಗದ ಬಾಧೆ ಹೆಚ್ಚಾಗಿ ಕಂಡು ಬಂದಿದೆ. ಈಗಾಗಲೆ ಕಣೆ ನೋಣದ ಬಾಧೆಯಿಂದ ಸಂತ್ರಸ್ತರಾಗಿರುವ ರೈತರಿಗೆ ಈಗ ದುಂಡಾಣು ಮಚ್ಚೆ ರೋಗ ಮತ್ತಷ್ಟು ಆತಂಕಕ್ಕೆ ದೂಡಿದೆ.