ಗಂಗಾವತಿ: ರೈತರೊಬ್ಬರಿಗೆ ಸೇರಿದ ಕೊಟ್ಟಿಗೆಯಲ್ಲಿ ಕಟ್ಟಿಹಾಕಲಾಗಿದ್ದ ಸುಮಾರು 50 ಸಾವಿರ ರೂ. ಮೌಲ್ಯದ ಎಮ್ಮೆಗಳನ್ನು ಕದ್ದು ಸಾಗಿಸಿದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಎಮ್ಮೆಗಳ ಕಳ್ಳಸಾಗಣೆ: ಗಂಗಾವತಿಯಲ್ಲಿ ಮೂವರ ಬಂಧನ - ಜಾನುವಾರು ಕಳ್ಳರ ಬಂಧನ
ಎಮ್ಮೆಗಳನ್ನು ಕದ್ದು ಸಾಗಿಸಿದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಗಂಗಾವತಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೂವರು ಜಾನುವಾರು ಕಳ್ಳರ ಬಂಧನ
ಜಾನುವಾರು ವ್ಯಾಪಾರಿ ಹುಸೇನಸಾಬ ಖಲಂದರ್ ಅಮರಭಗತ್ಸಿಂಗ್ ನಗರ, ಜಂಗರಮರ ಕಲ್ಗುಡಿ ಗ್ರಾಮದ ಖಾಸಗಿ ವಾಹನಗಳ ಚಾಲಕ ರಿಜ್ವಾನ್ ಭಾಷಾಸಾಬ್, ಕೂಲಿ ಕಾರ್ಮಿಕ ದಾವೂದ್ ಲಾಲ್ಸಾಬ್ ಬಂಧಿತ ಆರೋಪಿಗಳು. ಜಾನುವಾರುಗಳ ಮಾಲೀಕ ನೀಡಿದ ದೂರಿನ ಹಿನ್ನೆಲೆ, ಸುಳಿವೊಂದನ್ನು ಹಿಡಿದು ಬೆನ್ನು ಹತ್ತಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಆರೋಪಿಗಳು ಆ. 31ರ ಮಧ್ಯರಾತ್ರಿ ಜಾನುವಾರುಗಳನ್ನು ಕಳ್ಳತನ ಮಾಡಿ ಬಳ್ಳಾರಿಗೆ ಸಾಗಿಸಿದ್ದಾರೆ. ಅಲ್ಲಿ ವಧಾ ಗೃಹಕ್ಕೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.